ದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೈನಿಕರು: ಸಂಶಯ ಮೂಡಿಸಿದ ಡ್ರಾಗನ್ ಸೇನೆಯ ನಡೆ

ಲಡಾಖ್ ನಲ್ಲಿ ಅತಿಕ್ರಮ ಪ್ರವೇಶ ಮಾಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಸೇನೆ ಇದೀಗ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಕಾಣಿಸಿಕೊಂಡಿದ್ದು, ಭದ್ರತಾ ದೃಷ್ಟಿಯಿಂದ..

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೈನಿಕರು: ಸಂಶಯ ಮೂಡಿಸಿದ ಡ್ರಾಗನ್ ಸೇನೆಯ ನಡೆ
ಸಂಗ್ರಹ ಚಿತ್ರ
Published On :

ಶ್ರೀನಗರ: ಲಡಾಖ್ ನಲ್ಲಿ ಅತಿಕ್ರಮ ಪ್ರವೇಶ ಮಾಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಸೇನೆ ಇದೀಗ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ   ಕಾಣಿಸಿಕೊಂಡಿದ್ದು, ಭದ್ರತಾ ದೃಷ್ಟಿಯಿಂದ ಸಾಕಷ್ಟು ಶಂಕೆ ವ್ಯಕ್ತವಾಗುವಂತೆ ಮಾಡಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ನೌವ್ ಗಾಮ್ ಸೆಕ್ಟರ್ ನಲ್ಲಿ ಚೀನಾದ ಲಿಬರೇಷನ್ ಆರ್ಮಿಯ ಹಿರಿಯ ಸೈನ್ಯಾಧಿಕಾರಿಗಳು ಕಾಣಿಸಿಕೊಂಡಿದ್ದು, ಉಭಯ ದೇಶಗಳ  ಗಡಿಯಲ್ಲಿ ತೀವ್ರ ಭದ್ರತಾ ಶಂಕೆ ವ್ಯಕ್ತವಾಗುತ್ತಿದೆ. ಮೂಲಗಳ ಪ್ರಕಾರ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ಸೈನಿಕರ ಮೂಲ ಸೌಕರ್ಯ ಕಾಮಗಾರಿಗಾಗಿ ಚೀನಾ  ಸೈನ್ಯಾಧಿಕಾರಿಗಳು ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ಈ ವಿವಾದಿತ ವಿಚಾರದಲ್ಲಿ ಪಾಕಿಸ್ತಾನ ಸೇನೆ ಅತೀವ ಗೌಪ್ಯತೆ ತೋರಿಸಿದ್ದು, ಪ್ರಮುಖವಾಗಿ ಭಾರತಕ್ಕೆ ಈ ವಿಚಾರ  ತಿಳಿಯದಂತೆ ಪಾಕಿಸ್ತಾನದ ಸೈನ್ಯಾಧಿಕಾರಿಗಳು ಮುತುವರ್ಜಿ ತೋರಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಪಾಕಿಸ್ತಾನ ಮತ್ತು ಚೀನಾ ಸೈನ್ಯಾಧಿಕಾರಿಗಳ ನಡುವಿನ ಸಂಭಾಷಣೆಯನ್ನು ಗೌಪ್ಯವಾಗಿ ಆಲಿಸಿದ್ದು, ಸಂಭಾಷಣೆಯಲ್ಲಿ ಪಾಕಿಸ್ತಾನಿ  ಅಧಿಕಾರಿಗಳೇ ಚೀನಾದ ಸೈನ್ಯಾಧಿಕಾರಿಗಳಿಗೆ ಗಡಿಗೆ ಆಗಮಿಸುವಂತೆ ಆಹ್ವಾನವಿತ್ತ ಸ್ಫೋಟಕ ಮಾಹಿತಿ ಕೂಡ ಬಹಿರಂಗವಾಗಿದೆ. ಪಾಕಿಸ್ತಾನ ಗಡಿಗೆ ಚೀನಾ ಸೈನ್ಯಾಧಿಕಾರಿಗಳು  ಆಗಮಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಚೀನಾದ ಅಧಿಕಾರಿಗಳು ಗಡಿಯಲ್ಲಿ ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ ಈ ಬಾರಿ ಭಾರತದ ಗಡಿಗೆ ತೀರಾ  ಹತ್ತಿರವಾಗಿರುವ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ವೀಕ್ಷಣೆ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಈ ಬಗ್ಗೆ ಭಾರತೀಯ ಸೈನ್ಯಾಧಿಕಾರಿಗಳು ಚರ್ಚೆ ನಡೆಸಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.