ದೇಶ

ಭಾರತದ ಪ್ರಧಾನಿಯಂತೆ ವರ್ತಿಸಿ: ಮೋದಿಗೆ ಆರ್‌ಜೆಡಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಘ ಪರಿವಾರದ ಆಂತರಿಕ ಪ್ರಚಾರಕರಾಗಲ್ಲದೆ, ಭಾರತದ ಪ್ರಧಾನಿಯಂತೆ ವರ್ತಿಸಬೇಕು ಎಂದು ಆರ್‌ಜೆಡಿ ಶನಿವಾರ ಹೇಳಿಕೊಂಡಿದೆ...

ಭಾರತದ ಪ್ರಧಾನಿಯಂತೆ ವರ್ತಿಸಿ: ಮೋದಿಗೆ ಆರ್‌ಜೆಡಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :

ಪಾಟ್ನ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಘ ಪರಿವಾರದ ಆಂತರಿಕ ಪ್ರಚಾರಕರಾಗಲ್ಲದೆ, ಭಾರತದ ಪ್ರಧಾನಿಯಂತೆ ವರ್ತಿಸಬೇಕು ಎಂದು ಆರ್‌ಜೆಡಿ ಶನಿವಾರ ಹೇಳಿಕೊಂಡಿದೆ.

ಕಳೆದ ವರ್ಷ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆ ಸೋಲಿನ ನಂತರ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮೋದಿ ಭೇಟಿ ಕುರಿತಂತೆ ಮಾತನಾಡಿರುವ ಆರ್‌ಜೆಡಿ ಪಕ್ಷದ ವಕ್ತಾರ ಮನೋಜ್ ಝಾ ಅವರು, ನರೇಂದ್ರ ಮೋದಿಯವರನ್ನು ಒಂದು ಬಾರಿಯಾದರೂ ಸಂಘ ಪರಿವಾರದ ಪ್ರಚಾರಕರಾಗಿ ಅಲ್ಲದೆ, ಭಾರತದ ಪ್ರಧಾನಮಂತ್ರಿಯಾಗಿ ನೋಡಬೇಕು. ಮೋದಿಯವರು ಬಿಹಾರವನ್ನು ಇತರೆ ರಾಜ್ಯಗಳಂತೆಯೇ ನೋಡಬೇಕೆಂದು ಬಯಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.