ಕನಯ್ಯಾನಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ನೀಡುತ್ತೇನೆ ಎಂದವನ ಬ್ಯಾಂಕ್ ಬ್ಯಾಲೆನ್ಸ್ ರು. 150!
ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡ ಕನಯ್ಯಾ ಕುಮಾರ್ ಅವರಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ಕೊಡುತ್ತೇನೆ...

Published On :
ನವದೆಹಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗಳ ಮುಖಂಡ ಕನಯ್ಯಾ ಕುಮಾರ್ ಅವರಿಗೆ ಗುಂಡಿಟ್ಟರೆ ರು. 11 ಲಕ್ಷ ಇನಾಮು ಕೊಡುತ್ತೇನೆ ಎಂದು ಘೋಷಿಸಿದ್ದ ಪೂರ್ವಾಂಚಲ್ ಸೇನಾ ಅಧ್ಯಕ್ಷ ಆದರ್ಶ್ ಶರ್ಮಾ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ? ರು. 150 !
ರೋಹಿಣಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಶರ್ಮಾ, ಹಲವಾರು ತಿಂಗಳಿನಿಂದ ಬಾಡಿಗೆಯನ್ನೂ ಪಾವತಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕನಯ್ಯಾ ಅವರನ್ನು ಹತ್ಯೆ ಮಾಡಿದರೆ ಪೂರ್ವಾಂಚಲ್ ಸೇನೆ ವತಿಯಿಂದ ರು. 11 ಲಕ್ಷ ಬಹುಮಾನವನ್ನು ನೀಡಲಾಗುವುದು ಎಂದು ಬರೆದ ಕರಪತ್ರವನ್ನು ಶರ್ಮಾ ಹಂಚಿದ್ದರು. ಈ ರೀತಿ ಕರಪತ್ರ ಹಂಚುದುದಕ್ಕಾಗಿ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿದ್ದರು.
ಕೇಸು ದಾಖಲಾದ ನಂತರ ಶರ್ಮಾ ತಲೆ ಮರೆಸಿಕೊಂಡಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


