ರಾವಿ ನದಿಯಲ್ಲಿ ಕೊಚ್ಚಿಹೋದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಯೋಧರು
ಹಿಮಾಚಲ ಪ್ರದೇಶದ ಚಂಬಾ ಬಳಿ ರಾವಿ ನದಿಯ ನೀರಿನ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡಿದ್ದರಿಂದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಸೈನಿಕರು

ಚಂಡೀಘರ್: ಹಿಮಾಚಲ ಪ್ರದೇಶದ ಚಂಬಾ ಬಳಿ ರಾವಿ ನದಿಯ ನೀರಿನ ಪ್ರಮಾಣದಲ್ಲಿ ಅನಿರೀಕ್ಷಿತ ಏರಿಕೆ ಕಂಡಿದ್ದರಿಂದ ಪಠಾನ್ ಕೋಟ್ ವಾಯುನೆಲೆಯ ಇಬ್ಬರು ಐ ಎ ಎಫ್ ಸೈನಿಕರು ಶನಿವಾರ ಸಂಜೆ ಕೊಚ್ಚಿಹೋಗಿದ್ದಾರೆ. ಈ ಘಟನೆಯಲ್ಲಿ ಮೂವರು ಸೈನಿಕರು ಕೂಡ ಗಾಯಗೊಂಡಿದ್ದಾರೆ.
ಕೊಚ್ಚಿಹೋದ ಸೈನಿಕರನ್ನು ಮೀರತ್ ನ ೨೬ ವರ್ಷದ ನಿತೇಶ್ ಮಿಶ್ರಾ ಮತ್ತು ಜೈಪುರದ ೩೦ ವರ್ಷದ ಶಕ್ತಿ ಸಿಂಗ್ ಎಂದು ಗುರುತಿಸಲಾಗಿದ್ದು, ಭಾನುವಾರ ಬೆಳಗ್ಗೆ ಅವರ ದೇಶವನ್ನು ಪತ್ತೆಹಚ್ಚಲಾಗಿದ್ದು, ಶವಪರೀಕ್ಷೆಗೆ ಕಳುಹಿಸಲಾಗಿದೆ. ಶೀಘ್ರದಲ್ಲಿ ದೇಹವನ್ನು ಅವರ ಕುಟುಂಬಗಳ ವಶಕ್ಕೆ ಕೊಡಲಾಗುವುದು ಎಂದು ತಿಳಿದುಬಂದಿದೆ.
ಇನ್ನೂ ಮೂವರು ಈಜಾಡಿ ಪ್ರಾಣ ಉಳಿಸಿಕೊಂಡಿದ್ದು, ಅವರಿಗೆ ಪ್ರಾದೇಶಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರುಗಳು ನಾವಲ್ ಪಾಂಡೆ, ನವೀನ್ ಶರ್ಮಾ ಮತ್ತು ಗಜೇಂದರ್ ಸಿಂಗ್ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೈಡ್ರೋ ಇಂಧನ ಕಾರ್ಪೊರೇಶನ್(ಎನ್ ಎಚ್ ಪಿ ಸಿ) ಚಮೇರಾ ಅಣೆಕಟ್ಟಿನಿಂದ ಅನಿರಿಕ್ಷಿತವಾಗಿ ನೀರು ಬಿಡುಗಡೆ ಮಾಡಿದ್ದರಿಂದ ನದಿಯ ನೀರಿನ ಮಟ್ಟ ಏರಿ ಈ ದುರ್ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.
ಎನ್ ಎಚ್ ಪಿ ಸಿ ಯ ಸೈರನ್ ಈ ಸೈನಿಕರಿಗೆ ಕೇಳಿಸಲಿಲ್ಲ ಎಂದು ದೂರಲಾಗಿದ್ದು, ಈ ಘಟನೆಯ ತನಿಖೆಗೆ ಆದೇಶಿಸಲಾಗಿದೆ.
"ಈ ಐದು ಜನ ಸೈನಿಕರು ರಜೆಯಲ್ಲಿದ್ದರು ಮತ್ತು ಅವರು ತಮ್ಮ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾಗ, ಅನಿರೀಕ್ಷಿತವಾಗಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಇಬ್ಬರು ಕೊಚ್ಚಿ ಹೋಗಿದ್ದಾರೆ" ಎಂದು ಚಂಬಾದ ಸಹ ನಿರ್ದೇಶಕ ಸುದೇಶ್ ಮೊಖ್ತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


