ದೇಶ

ಈ ಒಂದು ವಿಷಯದ ಬಗ್ಗೆ ಮಾತ್ರ ನನಗೆ ಬೇಸರವಿದೆ: ವಿಜಯ್ ಮಲ್ಯ

ಇದೆಲ್ಲದರ ನಡುವೆ ತನಗೆ ಈ ಒಂದು ವಿಷಯದ ಬಗ್ಗೆ ಬೇಸರವಿದೆ ಎಂದು ಮಲ್ಯ ಹೇಳಿದ್ದಾರೆ. ಅದೇನಪ್ಪಾ ಅಂದ್ರೆ ತೈಲ ಬೆಲೆ ಇಷ್ಟೊಂದು ಕುಸಿದಿರುವ...

ಈ ಒಂದು ವಿಷಯದ ಬಗ್ಗೆ ಮಾತ್ರ ನನಗೆ ಬೇಸರವಿದೆ: ವಿಜಯ್ ಮಲ್ಯ
ವಿಜಯ್ ಮಲ್ಯ
Published On :
ಮುಂಬೈ: ಕಿಂಗ್ ಫಿಷರ್ ಏರ್‌ಲೈನ್ಸ್ ಸಂಸ್ಥೆ ಮತ್ತು ಉದ್ಯಮಿ ವಿಜಯ್ ಮಲ್ಯ ಎಸ್‌ಬಿಐನ ನೇತೃತ್ವದ 17 ಸಾಲದಾತ ಬ್ಯಾಂಕುಗಳ ಒಕ್ಕೂಟಕ್ಕೆ ರು. 78000 ಕೋಟಿ ಪಾವತಿ ಮಾಡಬೇಕಾಗಿತ್ತು, ಸಾಲ ವಸೂಲಾತಿಗಾಗಿ ಬ್ಯಾಂಕ್‌ಗಳು ಕಾರ್ಯ ಪ್ರವೃತ್ತವಾಗಿವೆ. 
ಇದೆಲ್ಲದರ ನಡುವೆ ತನಗೆ ಈ ಒಂದು ವಿಷಯದ ಬಗ್ಗೆ ಬೇಸರವಿದೆ ಎಂದು ಮಲ್ಯ ಹೇಳಿದ್ದಾರೆ. ಅದೇನಪ್ಪಾ ಅಂದ್ರೆ ತೈಲ ಬೆಲೆ ಇಷ್ಟೊಂದು ಕುಸಿದಿರುವ ಹೊತ್ತಲ್ಲಿ ನನ್ನ ವಿಮಾನ ಹಾರಿಸಲು ಸಾಧ್ಯವಾಗಿಲ್ಲವಲ್ಲಾ ಎಂಬ ಬೇಸರವಿದೆ.
ನನಗೆ ಹೆಚ್ಚಿನ ವಿಷಯಗಳ ಬಗ್ಗೆ ಪಶ್ಚಾತಾಪವಿಲ್ಲ. ಆದರೆ ತೈಲ ಬೆಲೆ ಕುಸಿದಿರುವಾಗ ಕಿಂಗ್ ಫಿಶರ್ ಏರ್‌ಲೈನ್ಸ್ ಹಾರಾಟ ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಬೇಸರ ನನಗಿದೆ.
ಆದಾಗ್ಯೂ, ತಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದ ಮಲ್ಯ ಅವರು, 28 ಹರೆಯದಲ್ಲಿ ಯುಬಿ ಗ್ರೂಪ್‌ನ ಮಾಲೀಕನಾಗಿದ್ದೆ. ನಾನೇನೂ ಸಾಬೀತು ಪಡಿಸಬೇಕಿಲ್ಲ. ನಾನು ಭಾರತದ ದೊಡ್ಡ ಬೀರ್ ಕಂಪನಿಯನ್ನು ಸ್ಥಾಪಿಸಿದೆ. ದೊಡ್ಡ ಸ್ಪಿರಿಟ್ ಕಂಪನಿಯನ್ನು ಕಟ್ಟಿದೆ. ಆದ್ರೆ, ಕಿಂಗ್ ಫಿಶರ್ ಏರ್‌ಲೈನ್ಸ್‌ನಲ್ಲಿ ಎಡವಿದೆ. ಅದಕ್ಕೆ ಏನು ಕಾರಣ ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ಇದೆ ಎಂದು ಸಂದರ್ಶನವೊಂದರಲ್ಲಿ ಮಲ್ಯ ಹೇಳಿದ್ದಾರೆ.
ಅವಿವೇಕದಿಂದ ಇದು ನಡೆದದ್ದಲ್ಲ, ಇದಕ್ಕೆ ನಿಜವಾದ ಕಾರಣಗಳಿವೆ. ಅದು ಸರಿಯಾಗಿ ಕಾರ್ಯ ಪ್ರವೃತ್ತವಾಗಿಲ್ಲ. ಜೀವನದಲ್ಲಿ ಏರಿಳಿತಗಳು ಸಹಜ. ಆ ಬಗ್ಗೆ ನನಗೆ ಹೆಮ್ಮೆ ಇದೆ.
ಅದೇ ವೇಳೆ ಅದ್ದೂರಿ ಪಾರ್ಟಿಗಳಲ್ಲಿ ಭಾಗವಹಿಸುವ ಐಷಾರಾಮಿ ವ್ಯಕ್ತಿಯಾದ ಮಲ್ಯ ಡಿಯಾಜಿಯೋ ಡೀಲ್ ನಂತರ ಇಂಗ್ಲೆಂಡ್ ನಲ್ಲೇ ಹೆಚ್ಚಿನ ಸಮಯ ಕಳೆಯಲಿದ್ದಾರೆ ಎಂಬ ಸುದ್ದಿಯನ್ನು  ಅಲ್ಲಗೆಳೆದಿದ್ದಾರೆ.
ನನಗೆ ಇಂಗ್ಲೆಂಡ್‌ನಲ್ಲಿ ಮನೆಯಿದೆ. ನಾನು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ನಿರ್ಧರಿಸಿದ್ದೇನೆ ಎಂದಷ್ಟೇ ನಾನು ಹೇಳಿದ್ದು ಎಂದು ಮಲ್ಯ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.