ಕಥೇರಿಯಾ ಪ್ರಚೋದನಾಕಾರಿಯಾಗಿ ಮಾತನಾಡಿಲ್ಲ: ರಾಜನಾಥ ಸಿಂಗ್
ಕೇಂದ್ರ ಸಚಿವ ರಾಮಶಂಕರ ಕಥೇರಿಯಾ ಅವರ ಭಾಷಣವನ್ನು ಕೇಳಿದ್ದು, ಕಥೇರಿಯಾ ಅವರು ಯಾವುದೇ ರೀತಿಯ ಪ್ರಚೋದನಾಕಾರಿಯಾಗಿ ಮಾತನಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ...

ನವದೆಹಲಿ: ಕೇಂದ್ರ ಸಚಿವ ರಾಮಶಂಕರ ಕಥೇರಿಯಾ ಅವರ ಭಾಷಣವನ್ನು ಕೇಳಿದ್ದು, ಕಥೇರಿಯಾ ಅವರು ಯಾವುದೇ ರೀತಿಯ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಹೇಳಿದ್ದಾರೆ.
ಮುಸ್ಲಿಮರ ಕುರಿತಂತೆ ಕಥೇರಿಯಾ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪಗಳ ಕುರಿತಂತೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ನಿನ್ನೆ ಸ್ಪಷ್ಟನೆ ನೀಡಿರುವ ಅವರು, ಕಥೇರಿಯಾ ಅವರ ಭಾಷಣವನ್ನು ಕೇಳಿದ್ದೇನೆ. ಭಾಷಣದಲ್ಲಿ ಪ್ರಚೋದನಾಕಾರಿ ಅಂಶಗಳಾವುದೂ ಕಂಡು ಬಂದಿಲ್ಲ. ನಮ್ಮ ಸರ್ಕಾರ ಪ್ರಚೋದನಾತ್ಮಕ ಹಾಗೂ ದೇಶ ವಿಭಜನೆಗೆ ಕಾರಣವಾಗುವಂಥ ಹೇಳಿಕೆಗಳನ್ನು ಖಂಡಿಸುತ್ತದೆ. ಅಂತಹ ಹೇಳಿಕೆಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಸಂವಿಧಾನ ಹಾಗೂ ಕಾನೂನಿಗೆ ಗೌರವ ನೀಡುತ್ತದೆ. ಕಥೇರಿಯಾ ಅವರು ಮಾತನಾಡಿದ್ದಾರೆಂದು ಹೇಳಲಾಗುತ್ತಿರುವ ಸಿಡಿಯನ್ನು ಈಗಾಗಲೇ ಪರಿಶೀಲನೆಗೆ ನೀಡಲಾಗಿದೆ. ಈಗಾಗಲೇ ಅದರ ವರದಿಯೂ ಬಂದಿದ್ದು, ವರದಿಯಲ್ಲಿ ಆಕ್ಷೇಪಾರ್ಹವೇನೂ ಹಾಗೂ ಪ್ರಚೋದನಾಕಾರಿಯಾಗಿರುವುದಾವುದೂ ಕಂಡುಬಂದಿಲ್ಲ ಎಂದು ತಿಳಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


