ಅಧಿಕೃತ ಮೈತ್ರಿಗೂ ಮುನ್ನವೇ ಸಿಪಿಐ(ಎಂ)-ಕಾಂಗ್ರೆಸ್ ನಿಂದ ಜಂಟಿ ಪ್ರತಿಭಟನೆ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ ಇನ್ನೂ ಅಧಿಕೃತವಾಗಿಲ್ಲ, ಆದರೆ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಪ್ರತಿಭಟನೆ, ಸ್ಥಳೀಯ ಮಟ್ಟದ ಪ್ರಚಾರ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿ ಇನ್ನೂ ಅಧಿಕೃತವಾಗಿಲ್ಲ, ಆದರೆ ಮೈತ್ರಿ ಅಧಿಕೃತವಾಗುವುದಕ್ಕೂ ಮುನ್ನವೇ ಉಭಯ ಪಕ್ಷಗಳ ನಾಯಕರು ಜಂಟಿಯಾಗಿ ಪ್ರತಿಭಟನೆ, ಸ್ಥಳೀಯ ಮಟ್ಟದ ಪ್ರಚಾರ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ.
ಬಿಜೆಪಿ, ತೃಣಮೂಲ ಕಾಂಗ್ರೆಸ್ ವಿರುದ್ಧ ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕೆಂದು ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಬಂದ್ಯೋಪಾಧ್ಯಾಯ ಕರೆ ನೀಡಿದ್ದರು. ಸಿಪಿಐ(ಎಂ) ನೊಂದಿಗೆ ಮೈತ್ರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಆದರೂ ರಾಜ್ಯಮಟ್ಟದ ನಾಯಕರು ಮೈತ್ರಿ ಮೋಡ್ ನಲ್ಲಿದ್ದು ಜಂಟಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಮೈತ್ರಿಯ ಸಾಧ್ಯತೆಯ ಸಂದೇಶ ರವಾನಿಸುತ್ತಿದ್ದಾರೆ.
ಮೈತ್ರಿಯ ಕುರಿತು ತೃಣಮೂಲ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್ ಬಂದ್ಯೋಪಾಧ್ಯಾಯ, ಸಿಪಿಐ(ಎಂ) ಕಾಂಗ್ರೆಸ್ ಮೈತ್ರಿ ಬಗ್ಗೆ ಟಿಎಂಸಿ ಹೆದರುತ್ತಿದೆ. ಇಲ್ಲದೇ ಇದ್ದರೆ ಮೈತ್ರಿ ಕುರಿತು ಹೇಳಿಕೆಗಳನ್ನೇಕೆ ನೀಡಬೇಕು ಎಂದು ಬಂದ್ಯೋಪಾಧ್ಯಾಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್- ಸಿಪಿಐ(ಎಂ) ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಲಿ ನಂತರ ಅದಕ್ಕೆ ಜನರು ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


