ನಿಮ್ಮ ಪತಿಯರನ್ನು ಕಂಟ್ರೋಲ್ ಮಾಡಿ: ನಟರ ಪತ್ನಿಯರಿಗೆ ದೆಹಲಿ ಸರ್ಕಾರ ಪತ್ರ
ಪಾನ್ ಮಸಾಲ ಜಾಹೀರಾತುಗಳನ್ನು ತಡೆ ಹಿಡಿಯಲು ಈಗಾಗಲೇ ಸಾಕಷ್ಟು ಹರಸಾಹಸ ಪಡುತ್ತಿರುವ ದೆಹಲಿ ಸರ್ಕಾರ, ಇದೀಗ ಪಾನ್ ಮಸಾಲ ಜಾಹೀರಾತುಗಳಲ್ಲಿ ನಟಿಸದಂತೆ ನಿಮ್ಮ ಪತಿಯರನ್ನು ನಿಯಂತ್ರಿಸಿ ಎಂದು ಹೇಳಿ ನಟರ ಪತ್ನಿಯರಿಗೆ ಪತ್ರವನ್ನು...

ನವದೆಹಲಿ: ಪಾನ್ ಮಸಾಲ ಜಾಹೀರಾತುಗಳನ್ನು ತಡೆ ಹಿಡಿಯಲು ಈಗಾಗಲೇ ಸಾಕಷ್ಟು ಹರಸಾಹಸ ಪಡುತ್ತಿರುವ ದೆಹಲಿ ಸರ್ಕಾರ, ಇದೀಗ ಪಾನ್ ಮಸಾಲ ಜಾಹೀರಾತುಗಳಲ್ಲಿ ನಟಿಸದಂತೆ ನಿಮ್ಮ ಪತಿಯರನ್ನು ನಿಯಂತ್ರಿಸಿ ಎಂದು ಹೇಳಿ ನಟರ ಪತ್ನಿಯರಿಗೆ ಪತ್ರವನ್ನು ಬರೆದು ಮನವಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಅಜಯ್ ದೇವಗನ್ ಪತ್ನಿ ಕಾಜೋಲ್, ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಅರ್ಬಾಜ್ ಖಾನ್ ಮತ್ತು ಗೋವಿಂದ ಅವರ ಪತ್ನಿಯರಿಗೆ ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಪತ್ರವನ್ನು ಬರೆದು ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ದೆಹಲಿ ಸರ್ಕಾರ ಇದೀಗ ರವಾನಿಸಿರುವ ಪತ್ರದಲ್ಲಿ ಪಾನ್ ಮಸಾಲದಿಂದ ಜೀವವನ್ನೇ ಕಳೆದುಕೊಳ್ಳುವ ಮಾರಣಾಂತಿಕ ಕ್ಯಾನ್ಸರ್ ಖಾಯಿಲೆ ಬರುತ್ತಿದ್ದು, ಅನಾರೋಗ್ಯವನ್ನುಂಟು ಮಾಡುವ ಜಾಹೀರಾತುಗಳಲ್ಲಿ ನಟನೆ ಮಾಡದಂತೆ ನಿಮ್ಮ ಪತಿಯರನ್ನು ನಿಯಂತ್ರಿಸಿ ಎಂದು ಪತ್ರದಲ್ಲಿ ಮನವಿಯನ್ನು ಮಾಡಿದೆ.
ಈ ಹಿಂದಷ್ಟೇ ದೆಹಲಿ ಸರ್ಕಾರ ನೀಲಿ ಚಿತ್ರತಾರೆ ಸನ್ನಿಲಿಯೋನ್ ಅವರಿಗೂ ಪತ್ರವನ್ನು ಬರೆದಿತ್ತು. ಪತ್ರದಲ್ಲಿ ಪಾನ್ ಮಸಾಲ ಜಾಹೀರಾತುಗಳಲ್ಲಿ ನಟನೆ ಮಾಡದಂತೆ ಮನವಿಯನ್ನು ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸನ್ನಿ ಇನ್ನು ಮುಂದೆ ಇಂತಹ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು.
ಇದರಂತೆ ಅಜಯ್ ದೇವಗನ್, ಶಾರುಖ್, ಅರ್ಬಾಜ್ ಖಾನ್ ಹಾಗೂ ಗೋವಿಂದ ಅವರಿಗೂ ಪತ್ರ ಬರೆದಿತ್ತು. ಆದರೆ, ಮನವಿಗೆ ನಟರಿಂದ ಯಾವುದೇ ಪ್ರತಿಕ್ರಿಯೆಗಳಾಗಲಿ ಸ್ಪಂದನೆಗಳಾಗಲಿ ಬಂದಿರಲಿಲ್ಲ. ಹೀಗಾಗಿ ನಟರ ಪತ್ನಿಯರಿಗೆ ಪತ್ರ ಬರೆಯುವ ಮೂಲಕ ದೆಹಲಿ ಸರ್ಕಾರ ಮನವಿಯನ್ನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


