ಅಮರನಾಥ್ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಮೊದಲ ತಂಡ
ಜುಲೈ.2 ರಿಂದ ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆ ಪ್ರಾರಂಭವಾಗಲಿದ್ದು, 1,138 ಯಾತ್ರಾರ್ಥಿಗಳ ಮೊದಲ ತಂಡ ಜಮ್ಮುಗೆ ಹೊರಟಿದೆ.

ಜಮ್ಮು: ಜುಲೈ.2 ರಿಂದ ಜಮ್ಮು-ಕಾಶ್ಮೀರದಲ್ಲಿ ಅಮರನಾಥ್ ಯಾತ್ರೆ ಪ್ರಾರಂಭವಾಗಲಿದ್ದು, 1,138 ಯಾತ್ರಾರ್ಥಿಗಳ ಮೊದಲ ತಂಡ ಜಮ್ಮುಗೆ ಹೊರಟಿದೆ.
ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್, ಲೋಕಸಭಾ ಸದಸ್ಯ ಜುಗಲ್ ಕಿಶೋರ್, ಕಿರಿಯ ಸಚಿವರಾದ ಪ್ರಿಯಾ ಸೇಥಿ, ಅಮರನಾಥ್ ಯಾತ್ರೆಗೆ ಯಾತ್ರಾರ್ಥಿಗಳ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ. ಮೊದಲ ತಂಡದಲ್ಲಿ ತೆರಳಿರುವ 1,138 ಯಾತ್ರಾರ್ಥಿಗಳ ಪೈಕಿ 225 ಮಹಿಳೆಯರು, 900 ಪುರುಷರು, 13 ಮಕ್ಕಳು ತೆರಳಿದ್ದಾರೆ. ಅಮರನಾಥ ಯಾತ್ರೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಜುಲೈ.2 ರಂದು ಅಮರನಾಥ ಗುಹೆಯಲ್ಲಿ ಶಿವನ ಲಿಂಗದ ದರ್ಶನ ಪಡೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


