ದೇಶ

ಹಿರಿಯ ನಿರ್ದೇಶಕ ಮೃನಲ್ ಸೇನ್ ನಿಧನ ವಾರ್ತೆ ಟ್ವಿಟರ್ ನಲ್ಲಿ ವೈರಲ್

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮೃನಲ್ ಸೇನ್ ಅವರು ನಿಧನರಾಗಿದ್ದಾರೆ ಎಂಬ ವದಂತಿ ಟ್ವೀಟರ್ ನಲ್ಲಿ ವೈರಲ್ ಆಗಿದ್ದು, ಮ್ರಿನಲ್ ಸೇನ್ ಆರೋಗ್ಯವಾಗಿದ್ದಾರೆ ಇದು...

ಹಿರಿಯ ನಿರ್ದೇಶಕ ಮೃನಲ್ ಸೇನ್ ನಿಧನ ವಾರ್ತೆ ಟ್ವಿಟರ್ ನಲ್ಲಿ ವೈರಲ್
ಮೃನಲ್ ಸೇನ್
Published On :

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮೃನಲ್ ಸೇನ್ ಅವರು ನಿಧನರಾಗಿದ್ದಾರೆ ಎಂಬ ವದಂತಿ ಟ್ವೀಟರ್ ನಲ್ಲಿ ವೈರಲ್ ಆಗಿದ್ದು, ಮೃನಲ್ ಸೇನ್ ಆರೋಗ್ಯವಾಗಿದ್ದಾರೆ ಇದು ಸುಳ್ಳು ಸುದ್ದಿ ಎಂದು ಕುಟುಂಬವರ್ಗ ಸ್ಪಷ್ಟನೆ ನೀಡಿದೆ.

94 ವರ್ಷದ ಮೃನಲ್ ಸೇನ್ ಅವರು ದೀರ್ಘಾವದಿ ಕಾಯಿಲೆಯಿಂದ ಬಳಲುತ್ತಿದ್ದು ಅವರಿಂದ ಮೊಬೈಲ್ ಫೋನ್ ನನ್ನು ದೂರವಿಡಲಾಗಿದೆ. ಆದರೆ ಅವರು ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

ಮೃನಲ್ ಸೇನ್ ನಿರ್ದೇಶನದ 1969ರಲ್ಲಿ ತೆರೆಗೆ ಬಂದ ಭುವನ್ ಸೋಮೆ ಹಾಗೂ 1984ರಲ್ಲಿ ಬಿಡುಗಡೆಯಾಗಿದ್ದ ಕಾಂದಹಾರ್ ಚಿತ್ರಗಳು ಭಾರತ ಚಿತ್ರರಂಗದ ಮೈಲುಗಲ್ಲು ಚಿತ್ರಗಳಾಗಿವೆ.

ಕಥೆಗಾರ ಅಮಿತವ್ ಘೋಷ್ ಅವರು ಮೃನಲ್ ಸೇನ್ ಅವರು ನಿಧನರಾಗಿದ್ದಾರೆ ಎಂಬ ಸಂದೇಶವನ್ನು ಟ್ವೀಟಿಸಿದ್ದು, ನಂತರ ಟ್ವೀಟರ್ ನಲ್ಲಿ ವೈರಲ್ ಆಗಿದೆ. ಇದರಿಂದ ಕಳೆದ ರಾತ್ರಿಯಿಂದ ಅಭಿಮಾನಿಗಳು ಹಾಗೂ ಹಿತೈಷಿಗಳು ದೂರವಾಣಿ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಹೀಗಾಗಿ ಕುಟುಂಬವರ್ಗ ಮೃನಲ್ ಸೇನ್ ಆರೋಗ್ಯವಾಗಿದ್ದು ಅವರ ನಿಧನ ವಾರ್ತೆ ವಂದತಿಯಾಗಿದ್ದು ಯಾರು ಇದನ್ನು ನಂಬಬೇಡಿ ಎಂದು ಮನವಿ ಮಾಡಿದೆ.

ಅತ್ಯುತ್ತಮ ನಿರ್ದೇಶನಕ್ಕಾಗಿ ಮೃನಲ್ ಸೇನ್ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಕೇಂದ್ರ ಸರ್ಕಾರ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.