ಕ್ಯಾಮೆರಾಗೆ ಪೋಸ್ ಕೊಡಲು ಹೋಗಿ ಕೆರೆಗೆ ಬಿದ್ದ ಮೇಯರ್
ಕೆರೆಯ ಕಳೆ ತೆಗೆಯುವ ಮಿಷನ್ ಮೇಲೆ ಹತ್ತಿ ಕ್ಯಾಮೆರಾ ಗೆ ಪೋಸ್ ಕೊಡಲು ಹೋಗಿ ಗೋವಾದ ಮೇಯರ್ ಕೆರೆಗೆ ಬಿದ್ದ ಘಟನೆ ನಡೆದಿದೆ...

ಪಣಜಿ: ಕೆರೆಯ ಕಳೆ ತೆಗೆಯುವ ಮಿಷನ್ ಮೇಲೆ ಹತ್ತಿ ಕ್ಯಾಮೆರಾ ಗೆ ಪೋಸ್ ಕೊಡಲು ಹೋಗಿ ಗೋವಾದ ಮೇಯರ್ ಕೆರೆಗೆ ಬಿದ್ದ ಘಟನೆ ನಡೆದಿದೆ.
ಪಣಜಿಯ ಕೆರೆಗಳಲ್ಲಿ ಬೆಳೆದಿರುವ ಕಳೆಯನ್ನು ತೆಗೆಯಲು ಪಣಜಿ ಮಹಾನಗರ ಪಾಲಿಗೆ ಹೊಸ ಯಂತ್ರ ಖರೀದಿಸಿತ್ತು. ಇದರ ಪ್ರಾತ್ಯಕ್ಷಿಕೆ ತೋರಿಸಲು ಭಾನುವಾರ ಸ್ವತಃ ಪಣಜಿ ಮೇಯರ್ ಸುರೇಂದ್ರ ಅವರೇ ಕಣಕ್ಕೆ ಇಳಿದಿದ್ದರು. ಈ ಯಂತ್ರದಲ್ಲಿ ಇಬ್ಬರು ಮಾತ್ರ ಕೂರಬಹುದಿತ್ತು. ಆದರೆ ಮೇಯರ್ ಸಾಹೇಬ್ರು ಪತ್ರಕರ್ತರೂ ಮತ್ತು ಕೆಲ ಅಧಿಕಾರಿಗಳನ್ನು ಯಂತ್ರದ ಮೇಲೆ ಹತ್ತಿಸಿಕೊಂಡು ಫೋಟೋಕ್ಕೆ ಪೋಸ್ ಕೊಡುತ್ತಿದ್ದರು.
ಈ ವೇಳೆ ತೂಕ ಹೆಚ್ಚಾದ ಕಾರಣ, ಏಕಾಏಕಿ ಯಂತ್ರ ಮಗುಚಿ, ಅದರ ಮೇಲಿದ್ದವರೆಲ್ಲಾ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದವರೆಲ್ಲಾ ಕೆರೆಗೆ ಧುಮುಕಿ ಮೇಯರ್ ಮತ್ತು ಇತರರನ್ನು ಮೇಲಕ್ಕೆ ಎತ್ತಿದ್ದಾರೆ.
ದೇವರ ದಯೆ ಯಾವುದೇ ಅನಾಹುತವಾಗದೇ ನಾನು ಪಾರಾಗಿ ಬಂದೆ ಎಂದು ಮೇಯರ್ ಸುರೇಂದ್ರ ಪುರ್ಟಡೋ ತಿಳಿಸಿದ್ದಾರೆ. ಇನ್ನು ಮೇಯರ್ ಸೇರಿದಂತೆ ನೀರಿಗೆ ಬಿದ್ದವರ ಮೊಬೈಲ್ ಫೋನ್ ಗಳು ಹಾನಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


