ದೇಶ

69 ವರ್ಷಗಳ ನಂತರ ಹಳ್ಳಿಗೆ ಬಂದ ಬಸ್

69 ವರ್ಷಗಳ ನಿರಂತರ ಕಾಯುವಿಕೆಯ ನಂತರ ಈ ಊರಿನ ಜನ ಬಸ್ಸಿನ ಸೌಭಾಗ್ಯ ಕಂಡಿದ್ದಾರೆ. ಅದು ಸಾಧ್ಯವಾಗಿದ್ದು...

69 ವರ್ಷಗಳ ನಂತರ ಹಳ್ಳಿಗೆ ಬಂದ ಬಸ್
ಚಮೋಲಿ ಜಿಲ್ಲೆಯ ಸಿಲ್​ಪತ ಗ್ರಾಮದ ನಿವಾಸಿಗಳು ಬಸ್ ನ್ನು ಸ್ವಾಗತಿಸಲು ನಿಂತಿರುವುದು.
Published On :

ಡೆಹ್ರಾಡೂನ್: 69 ವರ್ಷಗಳ ನಿರಂತರ ಕಾಯುವಿಕೆಯ ನಂತರ ಈ ಊರಿನ ಜನ ಬಸ್ಸಿನ ಸೌಭಾಗ್ಯ ಕಂಡಿದ್ದಾರೆ. ಅದು ಸಾಧ್ಯವಾಗಿದ್ದು, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ. ಈಗ ಈ ಹಳ್ಳಿ ಜನ ಬಸ್ ನಲ್ಲಿ ಓಡಾಡುವಂತಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಸಿಲ್​ಪತ ಗ್ರಾಮದ ನಿವಾಸಿಗಳು ಬಸ್ ಬಂದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಈ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಗಿತ್ತು. ಅದಿಬದ್ರಿ ತಾಲೂಕಿನಿಂದ ಸಿಲ್​ಪತ ಗ್ರಾಮಕ್ಕೆ 21 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಪಕ್ಕಾ ರಸ್ತೆಯಾದ ನಂತರ ಈ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದೆ.

ಹತ್ತಿರ ಮಾರುಕಟ್ಟೆಗೆ ಹೋಗಲೂ ಸಹ ನಾವು ದಿನನಿತ್ಯ ಹಲವು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತಿತ್ತು, ಇನ್ನು ಪಟ್ಟಣಗಳಿಗೆ ತೆರಳುವುದು ಇನ್ನೂ ಕಷ್ಟದ ಕೆಲಸವಾಗಿತ್ತು. ಆದರೆ ಸ್ವಾತಂತ್ರ್ಯ ಬಂದ 69 ವರ್ಷಗಳ ನಂತರ ನಮ್ಮ ಕನಸು ನನಸಾಗಿದೆ. ನಮ್ಮ ಊರಿನ ಮುಂದಿನ ತಲೆಮಾರಿನವರು ನಾವು ಅನುಭವಿಸಿದ ಕಷ್ಟ ಅನುಭವಿಸುವ ಅಗತ್ಯವಿಲ್ಲ. ಅವರಿಗೆ ರಸ್ತೆ ಸಂಪರ್ಕ ಸಿಕ್ಕಿದೆ ಎಂದು ಗ್ರಾಮದ ಕಲಮ್ ಸಿಂಗ್ ಬಿಶ್ತ್ ಸಂತಸ ಹಂಚಿಕೊಂಡಿದ್ದಾರೆ.

ಉತ್ತರಾಖಂಡ ರಸ್ತೆ ಸಾರಿಗೆ ನಿಗಮದ ಬಸ್ ಮೊದಲ ಬಾರಿಗೆ ಈ ಊರಿಗೆ ಬಂದಾಗ ಊರಿನ ಜನರು ಸಂತಸದಿಂದ ಸ್ವಾಗತಿಸಿದ್ದಾರೆ. ನಮ್ಮ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ 2 ವರ್ಷದ ಹಿಂದೆಯೇ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಹಲವು ಬಾರಿ ನಾವು ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ ನಂತರ ನಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಲಾಯಿತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.