ಬಸ್ ಸೇವೆ

ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಣೆ: KSRTC ಬಸ್‌ಗೆ 30,000 ರೂ ದಂಡ!
ಕೇರಳದ ತ್ರಿಶೂರ್‌ನ ಅಂಬಲ್ಲೂರಿನಿಂದ ಮಲಪ್ಪುರಂನ ಕೊಲಪ್ಪುರಂಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಹತ್ತಿದ್ದ ತೋಟಶೇರಿಯಾರ ಮೂಲದ ವ್ಯಕ್ತಿ ಸಲ್ಲಿಸಿದ ದೂರಿನ ಮೇರೆಗೆ ಜಿಲ್ಲಾ ಗ್ರಾಹಕ ಆಯೋಗ ಈ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕ V/S ಖಾಸಗಿ ಸಾರಿಗೆ: 'ನಿಮ್ಮ ಜೊತೆ ಚರ್ಚೆಗೆ ಬಿಎಂಟಿಸಿ MD ಬರ್ತಾರೆ, ನೀವು ರೆಡಿಯಾ': ಪೈಗೆ ರಾಮಲಿಂಗಾ ರೆಡ್ಡಿ ಸವಾಲು
ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆಯಿದೆ ಎಂದು ಆರೋಪಿಸಿ, ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದರು.

Dasara holiday: ದಸರಾ ಹಬ್ಬಕ್ಕೆ KSRTC 2,300 ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆ
ಸಾಲು ಸಾಲು ರಜೆ ಇರುವ ಕಾರಣ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯಗಳಿಗೆ ತೆರಳುವ ಅನುಕೂಲಕಕ್ಕಾಗಿ ಸೆ.26,27 ಮತ್ತು ಸೆ.30 ರಂದು ಕೆಎಸ್‌ಆರ್‌ಟಿಸಿ 2,300 ಹೆಚ್ಚುವರಿ ಬಸ್ ಸಂಚಾರ ನಡೆಸಲಿವೆ.

ಮಣಿಪುರ: ಅಂತರ ಜಿಲ್ಲಾ ಬಸ್ ಸೇವೆ ಪುನರಾರಂಭ; ಕಾಂಗ್ಪೋಕ್ಪಿಯಲ್ಲಿ ಒಂದು ವಾಹನದ ಮೇಲೆ ದಾಳಿ
ಸೇನಾಪತಿ ಜಿಲ್ಲೆಗೆ ತೆರಳುತ್ತಿದ್ದ ಬಸ್ ಮೇಲೆ ಕಾಗ್ಪೋಕ್ಪಿ ಜಿಲ್ಲೆಯ ಗಮ್ಗಿಫೈ ಪ್ರದೇಶದಲ್ಲಿ ಗುಂಪೊಂದು ಪ್ರಯಾಣಿಕರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದಾಗ ದಾಳಿ ನಡೆದಿದೆ ಎಂದು ಅವರು ಹೇಳಿದರು.

ಚುನಾವಣಾ ರ‍್ಯಾಲಿಗೆ ಸರ್ಕಾರಿ ಬಸ್ ಗಳ ಬುಕ್ಕಿಂಗ್: ದೈನಂದಿನ ಸಾರಿಗೆ ವ್ಯವಸ್ಥೆ ಮೇಲೆ ಪರಿಣಾಮ ಸಾಧ್ಯತೆ!
ಚುನಾವಣಾ ಅಖಾಡಕ್ಕೆ ಕರ್ನಾಟಕ ಅಧಿಕೃತವಾಗಿ ಕಾಲಿಡುತ್ತಿದ್ದು, ರಾಜಕೀಯ ರ‍್ಯಾಲಿಗಳು, ಚುನಾವಣಾ ಸಂಬಂಧಿತ ಕಾರ್ಯಗಳಿಗೆ ಸಾವಿರಾರು ಸರ್ಕಾರಿ ಬಸ್ ಗಳು ಬುಕ್ ಆಗಲಿವೆ. ಈ ಹನ್ನೆಲೆಯಲ್ಲಿ ದೈನಂದಿನ ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪ್ರಯಾಣಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ: ತನ್ನ ಗ್ರಾಮಕ್ಕೆ ಬಸ್ ಸೇವೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಬಾಲಕಿ ರಸ್ತೆ ಅಪಘಾತದಲ್ಲಿ ನಿಧನ
ತನ್ನ ಗ್ರಾಮಕ್ಕೆ ನಿತ್ಯ ಬಸ್ ಸಂಚಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ 8ನೇ ತರಗತಿ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿಸುವ ಘಟನೆ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ನಡೆದಿದೆ.

ಕೊಲ್ಹಾಪುರ- ಬೆಳಗಾವಿ ನಡುವಣ ಬಸ್ ಸೇವೆ ಪುನರ್ ಆರಂಭ
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದದಿಂದ ಸ್ಥಗಿತಗೊಂಡಿದ್ದ ಕೊಲ್ಹಾಪುರ ಮತ್ತು ಬೆಳಗಾವಿ ನಡುವಣ ಬಸ್ ಸೇವೆ ಪುನರ್ ಆರಂಭಗೊಂಡಿದೆ. ಸ್ಥಳೀಯ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆ ಶುಕ್ರವಾರದಿಂದ ಭಾಗಶ: ಬಸ್ ಸೇವೆಯನ್ನು ಪುನರ್ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ಮಂಗಳೂರು - ಮಂತ್ರಾಲಯ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭ
ಮಂಗಳೂರಿನಿಂದ ಮಂತ್ರಾಲಯಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 970 ರೂಪಾಯಿ ಆಗಿರುತ್ತದೆ. ಈ ಸೇವೆಯನ್ನು ಆನ್ ಲೈನ್ ಮುಖಾಂತರವೂ ಬುಕ್ ಮಾಡಬಹುದು.

ಏಳು ತಿಂಗಳ ಬಳಿಕ ಮಂಗಳೂರು- ಕಾಸರಗೋಡು ನಡುವೆ ಬಸ್ ಸೇವೆ ಪುನಾರಂಭ
ಏಳು ತಿಂಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕೇರಳದ ಕಾಸರಗೋಡು ಜಿಲ್ಲೆಗಳ ನಡುವೆ ಸರಕಾರಿ ಬಸ್ ಸಂಚಾರ ಸೋಮವಾರ ಅರಂಭಗೊಂಡಿದೆ.

