ದೇಶ

ಶೇ.63 ಗ್ರಾಮೀಣ ಭಾರತದಲ್ಲಿ ಕುಡಿಯುವ ನೀರಿನ ಮೂಲವೇ ಇಲ್ಲ

ಭಾರತದಲ್ಲಿರುವ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಮನೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ, ಶೇ. 63 ರಷ್ಟು ಜನಸಂಖ್ಯೆಗೆ ಕುಡಿಯುವ ನೀರಿನ ಮೂಲ ..

ಶೇ.63 ಗ್ರಾಮೀಣ ಭಾರತದಲ್ಲಿ ಕುಡಿಯುವ ನೀರಿನ ಮೂಲವೇ ಇಲ್ಲ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಾರತದಲ್ಲಿರುವ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಮನೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ, ಶೇ. 63 ರಷ್ಟು ಜನಸಂಖ್ಯೆಗೆ ಕುಡಿಯುವ ನೀರಿನ ಮೂಲ ಇಲ್ಲದಿರುವುದರಿಂದ ಪ್ರತಿದಿನ ಸುಮಾರು 500 ಮೀಟರ್ ನಡೆದು ನೀರು ತರುವ ಪರಿಸ್ಥಿತಿಯಿದೆ ಎಂದು 2011 ಜನಗಣತಿ ಯ ಮಾಹಿತಿಯಿಂದ ತಿಳಿದು ಬಂದಿದೆ.

ಒಡಿಸಾ, ಜಾರ್ಖಂಡ್ ಮತ್ತು ಮಧ್ಯ ಪ್ರದೇಶದ ಶೇ. 35 ರಷ್ಟು ಗ್ರಾಮವಾಸಿಗಳು ಮನೆಯಲ್ಲಿ ಕುಡಿಯುವ ನೀರಿನ ಮೂಲವಿಲ್ಲದೇ ಅರ್ಧ ಕಿಮೀ ನಷ್ಟು ದೂರ ನಡಿಗೆಯಲ್ಲಿ ಕ್ರಮಿಸಿ ನೀರು ತರುತ್ತಾರೆ.

ಗ್ರಾಮೀಣ ಪ್ರದೇಶದ ನಾಲ್ಕು ಮನೆಗಳಲ್ಲಿ ಒಬ್ಬರು ಪ್ರತಿದಿನ ಅರ್ಧಗಂಟೆ ಕುಡಿಯುವ ನೀರು ತರಲು ನಡೆಯುತ್ತಾರೆ ಎಂದು ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆ ತಿಳಿಸಿದೆ.

ಇಡೀ ಭಾರತದಲ್ಲಿ, ಅತಿ ಹೆಚ್ಚು ದೂರ ನಡೆದು ಕುಡಿಯುವ ನೀರು ತರುವ ರಾಜ್ಯ ಒಡಿಸ್ಸಾ ಆಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಅವರು ಕುಡಿಯುವ ನೀರು ತರಲು ದೂರಕ್ಕೆ ನಡೆದುಕೊಂಡೇ ಹೋಗುತ್ತಾರೆ. ಅಲ್ಲಿ ಹೋದ ನಂತರ ತಮ್ಮ ಸರತಿಗಾಗಿ ಕಾದು ನಂತರ ನೀರು ತುಂಬಿಸಿಕೊಂಡು, ಸುಮಾರು 20 ಕೆಜಿ ತೂಕವಿರುವ ನೀರು ತುಂಬಿರುವ ಪಾತ್ರೆಗಳನ್ನು ಹೊತ್ತುಕೊಂಡು ಸಾಗುತ್ತಾರೆ ಎಂದು ಹೇಳಿದೆ.

ಇನ್ನು ನಗರ ಪ್ರದೇಶಗ ಶೇ. 20 ರಷ್ಟು ಮಂದಿ ಕುಡಿಯುವ ನೀರಿಗಾಗಿ ಅರ್ಧಗಂಟೆ ಸಮಯ ವ್ಯಯಿಸುತ್ತಾರೆ. ಇನ್ನೂ ಬೇಸಿಗೆ ಕಾಲದಲ್ಲಿ ಇಡೀ ಭಾರತ ದೇಶದ ಶೇ. 36 ರಷ್ಟು ಮಂದಿ ಕುಡಿಯುವ ನೀರಿಗಾಗಿ ಸುಮಾರು 30 ನಿಮಿಷ ವ್ಯಯಿಸುತ್ತಾರೆ. ಉಳಿದ ಋತುಮಾನಗಳಲ್ಲಿ ಇದು ಶೇ.23 ರಷ್ಟಿರುತ್ತದೆ.

ನೀರಿನ ಮೂಲ ಕಡಿಮೆಯಾದಂತೆ ನೀರು ಕಲುಷಿತವಾಗುತ್ತಿದೆ:

ಭಾರತದಲ್ಲಿ ಹೆಚ್ಚಾಗಿ ಕುಡಿಯುವ ನೀರಿಗಾಗಿ ಅಂತರ್ಜಲ ಮೂಲವನ್ನೇ ಅವಲಂಬಿಸಲಾಗಿದೆ, ಪ್ರತಿ ವರ್ಷ ಸುಮಾರು 230 ಘನ ಚದರ ಕಿಮೀ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಾಗತಿಕ ಉಪಯೋಗದ ಕಾಲು ಭಾಗದಷ್ಟು ಹೆಚ್ಚು ಬಳಕೆಯಾಗುತ್ತಿದೆ.

ವ್ಯವಸಾಯಕ್ಕಾಗಿ ರೈತರು ನೀರಿಗಾಗಿ ಅರಂತರ್ಜಲವನ್ನೇ ಅವಲಂಬಿಸಿದ್ದಾರೆ. ಕಡಿಮೆ ವಿದ್ಯುತ್ ದರದಿಂದಾಗಿ ಕೊಳವೆ ಬಾವಿಗಳನ್ನು ರೈತರು ಹೆಚ್ಚಾಗಿ ಅವಲಂಬಿಸಿದ್ದಾರೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಲಕ್ಷಾಂತರ ಮಂದಿ ಭಾರತೀಯರು ಕಲುಷಿತ ನೀರನ್ನು ಕುಡಿದು ಅಪಾಯ ಎದುರಿಸಬೇಕಿದೆ.

ರಾಷ್ಟ್ರೀಯ ನೀರು ಅಭಿವೃದ್ಧಿ ಎಜೆನ್ಸಿ 2016 ರಲ್ಲಿ ನೀಡಿದ ವರದಿ ಪ್ರಕಾರ, ಕುಡಿಯುವ ನೀರಿನ ಗುಣಮಟ್ಟದಲ್ಲಿ ರಾಜೀ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ನೀರಿನ ಸಂಬಂಧ ಅನಾರೋಗ್ಯ  ಹಿನ್ನೆಲೆಯಲ್ಲಿ ಭಾರತ 73 ಲಕ್ಷ ಕೆಲಸದ ದಿನಗಳನ್ನು ಕಳೆದು ಕೊಂಡಿದೆ.

ಬಿಹಾರ, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದ ಶೇ 18ರಷ್ಟು ಜನರು ಕುಡಿಯುತ್ತಿರುವ ನೀರಿನ ಗುಣಮಟ್ಟ ಉತ್ತಮವಾಗಿಲ್ಲ.  ಅವರಿಗೆ ಗುಣಮಟ್ಟದ ಕುಡಿಯುವ ನೀರು ಸಿಗುತ್ತಿಲ್ಲ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ತೆ ವರದಿ ಮಾಡಿದೆ. ಹೀಗಾಗಿ ಭಾರತದಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು, ಸ್ವಚ್ಚತೆ ಮತ್ತು ಮನೆಗಳ ಸ್ಥಿತಿಗಳನ್ನು ಸುಧಾರಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದೆ.

ಕುಡಿಯುವ ನೀರಿನ ಸಮಸ್ಯೆ ದೇಶದ  ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಶೈಕ್ಷಣಿಕವಾಗಿಯೂ ದೇಶ ಹಿಂದುಳಿಯುವಂತೆ ಮಾಡುತ್ತದೆ ಎಂದು ಯುನಿಸೆಫ್, ಯುಎನ್ ಡಿಪಿ ಮತ್ತು ಆಕ್ಸ್ ಫಾಮ್ ಗಳು ಅಭಿಪ್ರಾಯ ಪಟ್ಟಿವೆ.

ಎಲ್ಲದಕ್ಕೂ ಅವಶ್ಯಕವಾದ ನೀರು ಮನೆಯಲ್ಲಿ  ಇಲ್ಲದ ಕಾರಣ ಮಕ್ಕಳು, ಅದರಲ್ಲೂ ಹೆಚ್ಚಾಗಿ ಬಡ ಕುಟುಂಬಗಳ ಹೆಣ್ಣು ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿದ್ದಾರೆ. ಮನೆಯಲ್ಲಿ ಕುಡಿಯುವ ನೀರಿನ ಮೂಲ ಇಲ್ಲದ ಕಾರಣ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಬಹು ದೂರದವರೆಗೆ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮಾನವ ಅಭಿವೃದ್ಧಿ ಸೂಚ್ಯಂಕವೂ ಕೂಡ ಭಾರತದಲ್ಲಿ ಕಡಿಮೆ ಇದೆ ಎಂದು ಹೇಳಿದೆ.

ಪ್ರತಿ ವರ್ಷ ಶೇ. ರಷ್ಟು  ಪ್ರಮಾಣದ ನೀರು ಸಿಗುತ್ತಿದ್ದು, ಬೇಸಿಗೆಯಲ್ಲಿ ಮಾತ್ರ ಇದರ ಪ್ರಮಾಣ ಶೇ. 80 ರಷ್ಟಾಗುತ್ತದೆ ಎಂದು ಭಾರತ ಮಾನವ ಅಭಿವೃದ್ಧಿ ಸಮೀಕ್ಷೆ ತಿಳಿಸಿದೆ. ಶೇ 95ಕ್ಕಿಂತಲೂ ಹೆಚ್ಚಿನ ನಗರ ವಾಸಿಗಳು ತಮ್ಮ ಕುಡಿಯುವ ನೀರಿನ ಮೂಲಗಳನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಬಾಟಲ್ ನೀರು, ಕೊಳವೆ ಬಾವಿ ನೀರಿಗೆ ಮೊರೆ ಹೋಗಿದ್ದಾರೆ.

ಒಟ್ಟಿನಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರು ಎಲ್ಲಾ ಭಾರತೀಯರಿಗೂ ಸಿಗುತ್ತಿಲ್ಲ ಎಂದ ಸಮೀಕ್ಷೆಯಿಂದ ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.