ಮಾಮುಲು ಕೊಡದಕ್ಕೆ ಸೈಕಲ್ ಮೆಕಾನಿಕ್ ಮೇಲೆ ಬರ್ಬರ ಹಲ್ಲೆ
ತಿಂಗಳ ಮಾಮುಲು ಕೊಡದಕ್ಕೆ ಉದ್ರಿಕ್ತಗೊಂಡ ಗುಂಪೊಂದು ಸೈಕಲ್ ಮೆಕಾನಿಕ್ ಮೇಲೆ ಮಾರಕಾಸ್ತ್ರಗಳಿಂದ ಭರ್ಜರವಾಗಿ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ...

ಚೆನ್ನೈ: ತಿಂಗಳ ಮಾಮುಲು ಕೊಡದಕ್ಕೆ ಉದ್ರಿಕ್ತಗೊಂಡ ಗುಂಪೊಂದು ಸೈಕಲ್ ಮೆಕಾನಿಕ್ ಮೇಲೆ ಮಾರಕಾಸ್ತ್ರಗಳಿಂದ ಭರ್ಜರವಾಗಿ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ವ್ಯಾಸರ್ಪಡಿಯಲ್ಲಿ ಸ್ವಂತ ಸೈಕಲ್ ಶಾಪ್ ನಡೆಸುತ್ತಿದ್ದ 50 ವರ್ಷದ ಹರಿ ಅವರು ರಾತ್ರಿ 9 ಸುಮಾರಿನಲ್ಲಿ ತಮ್ಮ ಅಂಗಡಿ ಮುಂದೆ ನಿಂತಿದ್ದಾಗ ಬಂದ ಯುವಕರು ತಿಂಗಳ ಮಾಮುಲು ನೀಡುವಂತೆ ದಮ್ಕಿ ಹಾಕಿದ್ದಾರೆ. ಮಾಮುಲು ಕೊಡಲು ನಿರಾಕರಿಸಿದ ಹರಿ ಮೇಲೆ ಮುಗಿಬಿದ್ದ ಯುವಕರ ಗುಂಪು ಮಾರಕಾಸ್ತ್ರಗಳಿಂದ ತೀರ್ವವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಯುವಕರಿಂದ ಹಲ್ಲೆಗೊಳಗಾದ ಹರಿ ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರ ಗುಂಪು ಹರಿ ಅವರ ತಲೆ ಮುಖಕ್ಕೆ ಮನಬಂದಂತೆ ಇರಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


