ಮೋದಿ ಡಿಗ್ರಿ ವಿವಾದ: ಪ್ರಮಾಣ ಪತ್ರದ ಹಿಂದೆ ರಹಸ್ಯವಿದೆ ಎಂದ ಕೇಜ್ರಿವಾಲ್
ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದವಿ ಪ್ರಮಾಣಪತ್ರ ಸುದ್ದಿಗೆ ಬಂದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿಶ್ವವಿದ್ಯಾಲಯ...

ನವದೆಹಲಿ: ಮತ್ತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದವಿ ಪ್ರಮಾಣಪತ್ರ ಸುದ್ದಿಗೆ ಬಂದಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿಶ್ವವಿದ್ಯಾಲಯ ನೀಡಿರುವ ಪದವಿ ಪ್ರಮಾಣಪತ್ರದ ಹಿಂದೆ ರಹಸ್ಯವಿದೆ ಎಂದು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದೆಹಲಿ ವಿಶ್ವವಿದ್ಯಾಲಯ ಮೋದಿಯವರಿಗೆ ನೀಡಿರುವ ಪದವಿ ಪ್ರಮಾಣ ಪತ್ರದ ಹಿಂದೆ ರಹಸ್ಯ ಅಡಗಿದೆ. ಪದವಿ ಪ್ರಮಾಣಪತ್ರ ಪ್ರಮಾಣಿಕ ಹಾಗೂ ಅಧಿಕೃತವಾದದ್ದು ಎಂದು ಅಮಿತ್ ಶಾ ಆಗಲಿ ಅಥವಾ ಜೇಟ್ಲಿ ಅವರಾಗಲೀ ಯಾಕೆ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದವಿ ವಿಚಾರ ಖಾಸಗಿ ವಿಚಾರವೆಂದು ವಿಶ್ವವಿದ್ಯಾಲಯ ತಿಳಿಯುವುದಾದರೆ, ಈ ಬಗ್ಗೆ ಮೋದಿಯವರಿಗೆ ಪತ್ರವನ್ನು ಬರೆಯಲಿ. ಈ ಬಗ್ಗೆ ಸ್ಪಷ್ಟನೆ ತಿಳಿದುಕೊಂಡು ಅನುಮತಿ ಕೇಳಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


