ದೇಶ

ಆಡು ಭಾಷೆಯಾಗಿ ಸಂಸ್ಕೃತ ಕಲಿಸಲು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಕರೆ

ಸಂಸ್ಕೃತ ಭಾಷೆಯನ್ನು ಸಂವಹನದ ಭಾಷೆಯನ್ನಾಗಿ ಪರಿಗಣಿಸಬೇಕೆ ಹೊರತು ಶಾಸ್ತ್ರೀಯ ಭಾಷೆಯನ್ನಾಗಿ...

ಆಡು ಭಾಷೆಯಾಗಿ ಸಂಸ್ಕೃತ ಕಲಿಸಲು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಕರೆ
ಕಾರ್ಟೂನ್ ಚಿತ್ರ
Published On :

ನವದೆಹಲಿ: ಸಂಸ್ಕೃತ ಭಾಷೆಯನ್ನು ಸಂವಹನದ ಭಾಷೆಯನ್ನಾಗಿ ಪರಿಗಣಿಸಬೇಕೆ ಹೊರತು ಶಾಸ್ತ್ರೀಯ ಭಾಷೆಯನ್ನಾಗಿ ಅಲ್ಲ,ಮಕ್ಕಳು ಸಂಸ್ಕೃತವನ್ನು ಸುಲಲಿತವಾಗಿ ಮಾತನಾಡುವಂತಾಗಬೇಕು, ಅದಕ್ಕೆ ಸಂಸ್ಕೃತವನ್ನು ಹೇಳಿಕೊಡುವ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.ಮಕ್ಕಳು ಸಂಸ್ಕೃತವನ್ನು ಕೇವಲ ಕಲಿಯುವಂತಾಗಬಾರದು ಎಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಕೇಂದ್ರ ಸರ್ಕಾರವನ್ನು ಶಿಫಾರಸು ಮಾಡಿದೆ.

ಅದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರಿಗೆ ಮೇ 26ರಂದು ವರದಿಯನ್ನು ಮಂಡಿಸಿದೆ. ಅದರಲ್ಲಿ ವಿದ್ಯಾರ್ಥಿಗಳು ಭಾರತದ ವೈವಿಧ್ಯತೆಯನ್ನು ಮುಕ್ತವಾಗಿ ಸ್ವೀಕರಿಸುವಂತಾಗಬೇಕು; ದೇಶದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಅನುಸರಿಸರಿಸುವಂತಾಗಬೇಕು ಎಂದು ಹೇಳಿದೆ. ಈ ವರದಿಯನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಂಡು ಚರ್ಚೆ ಮಾಡಿ ನಂತರ ಸಚಿವಾಲಯದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆಯಡಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲಿ ಶೇಕಡಾ 25ರಷ್ಟು ಮೀಸಲಾತಿ ನೀಡಬೇಕೆಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡಿತ್ತು. ಅದರ ಜೊತೆಗೆ ಮಕ್ಕಳು ತಮ್ಮ ಇಷ್ಟದ ಭಾಷೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಹೇಳಿತ್ತು.

ಮಕ್ಕಳಿಗೆ 5ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಹಾಗೆಂದು ಪ್ರಾದೇಶಿಕ ಭಾಷೆಯ ಜೊತೆಗೆ ಇಂಗ್ಲೀಷ್ ನ್ನು ಬೋಧಿಸುವ ಆಯ್ಕೆಯನ್ನು ರಾಜ್ಯಗಳಿಗೆ ಬಿಡಬೇಕು ಎಂದು ಕರಡು ನೀತಿಯಲ್ಲಿ ಶಿಫಾರಸು ಮಾಡಲಾಗಿದೆ.

6ನೇ ತರಗತಿಯಿಂದ ದ್ವಿತೀಯ ಭಾಷೆಯನ್ನು, ದ್ವಿತೀಯ ಹಂತದಲ್ಲಿ ಮೂರನೇ ಭಾಷೆಯನ್ನು ಪಠ್ಯಕ್ರಮದಲ್ಲಿ ಜಾರಿಗೆ ತರಬೇಕು.ಮೂರೇ ಭಾಷೆ ನಿಗದಿತ ಭಾಷೆಯಾಗಿರಬಹುದು ಅಥವಾ ವಿದೇಶಿ ಭಾಷೆಯಾಗಿರಬಹುದು ಎಂದು ಕೂಡ ಶಿಫಾರಸ್ಸಿನಲ್ಲಿ ವಿವರಿಸಲಾಗಿದೆ.

ಈಗಾಗಲೇ ಮೂರು ಭಾಷಾ ವಿಷಯ ಸೂತ್ರ ಶಾಲಾ ಶಿಕ್ಷಣದ ಹಂತದಲ್ಲಿದೆ. ಆದರೆ ಪೋಷಕರ, ಶಿಕ್ಷಕರ, ಶಾಲೆಗಳ ಮತ್ತು ರಾಜ್ಯಗಳ ಆಸಕ್ತಿಯನ್ನು ಹೊಂದಿಕೊಂಡು ಆಯ್ಕೆ ಮಾಡಬೇಕಾಗುತ್ತದೆ. ಒಂದು ರಾಜ್ಯದಲ್ಲಿ ವಿದೇಶಿ ಭಾಷೆಯನ್ನು ಮೂರನೇ ಭಾಷೆಯನ್ನಾಗಿ ಕಲಿಸಲು ಬಯಸುವುದಾದರೆ ಅದನ್ನು ಮೂರು ಭಾಷಾ ವಿಷಯ ಸೂತ್ರದ ಉಲ್ಲಂಘನೆ ಎಂದು ಪರಿಗಣಿಸಬಾರದು ಎಂದು ಕರಡು ಸಮಿತಿಯ ಅಧ್ಯಕ್ಷ ಟಿಎಸ್ ಆರ್ ಸುಬ್ರಹ್ಮಣ್ಯನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.