ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ
ಸ್ವಯಂ ಘೋಷಿತ ದೇವಮಾನನೊಬ್ಬನ ಹಿಡಿತದಲ್ಲಿ ನೊಂದಿದ್ದ 28 ಯುವಕನ್ನು ಮುಂಬೈ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ...

ಮುಂಬೈ: ಸ್ವಯಂ ಘೋಷಿತ ದೇವಮಾನನೊಬ್ಬನ ಹಿಡಿತದಲ್ಲಿ ನೊಂದಿದ್ದ 28 ಯುವಕನ್ನು ಮುಂಬೈ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ.
ಮುಂಬೈನ ಕಂದೀವಾಲಿ ಪ್ರದೇಶದಲ್ಲಿನ ಸ್ವಯಂ ಘೋಷಿತ ದೇವಮಾನವನೊಬ್ಬ ಧರ್ಮ ಹೆಸರಿನಲ್ಲಿ 28 ಯುವಕರನ್ನು ಬಂಗಲೆಯಲ್ಲಿಟ್ಟುಕೊಟ್ಟು ಹಿಂಸೆ ನೀಡುತ್ತಿದ್ದಾನೆಂಬ ಮಾಹಿತಿ ತಿಳಿದ ಕೂಡಲೇ ಬಂಗಲೆ ಮೇಲೆ ದಾಳಿ ಮಾಡಿದ ಪೊಲೀಸರು ಯುವಕರನ್ನು ರಕ್ಷಣೆ ಮಾಡಿದ್ದಾರೆ.
ಧರ್ಮದ ಹೆಸರಿನಲ್ಲಿ 28 ಜನ ಯುವಕರನ್ನು ಕೂಡಿ ಹಾಕಿಕೊಂಡಿರುವ ಸ್ವಯಂ ಘೋಷಿತ ದೇವಮಾನನೊಬ್ಬ ಮಾನಸಿಕ ಹಾಗೂ ದೈಹಿಕವಾಗಿ ಪ್ರತೀನಿತ್ಯ ಹಿಂಸೆ ನೀಡುತ್ತಿದ್ದಾನೆಂದು ಹೇಳಿ ಮಗುವೊಂದು ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿತ್ತು.
ಇದರಂತೆ ಸಮ್ತಾ ನಗರದ ಪೊಲೀಸರು ಶುಕ್ರವಾರ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ 28 ಜನ ಯುವಕರು ಹಾಗೂ ಉತ್ತರ ಪ್ರದೇಶ ಮೂಲದ 12 ಜನ ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ವೇಳೆ ಭಗವಾನ್ ದಾಸ್ ತಿವಾರಿ ಮತ್ತು ದೇವೇಂದ್ರ ಮನೋಜ್ ದುಬೆ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


