ಸೂರತ್ ನಲ್ಲಿ ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್ ಎಸ್ಎಸ್ ಸಮವಸ್ತ್ರ, ಫೋಟೋ ವೈರಲ್
ಗುಜರಾತಿನ ಸೂರತ್ ಜಿಲ್ಲೆಯ ಲಸ್ಕನ ಗ್ರಾಮದಲ್ಲಿರುವ ಸ್ವಾಮಿ ನಾರಾಯಣ ಮಿಷನ್ ಶಾಲೆಯ ಆವರಣದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿನ...

Published On :
ಸೂರತ್: ಗುಜರಾತಿನ ಸೂರತ್ ಜಿಲ್ಲೆಯ ಲಸ್ಕನ ಗ್ರಾಮದಲ್ಲಿರುವ ಸ್ವಾಮಿ ನಾರಾಯಣ ಮಿಷನ್ ಶಾಲೆಯ ಆವರಣದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಲ್ಲಿನ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಶಾಲಾ ಆವರಣದಲ್ಲಿ ನಡೆದ 20 ದಿನಗಳ ಆರ್ ಎಸ್ ಎಸ್ ಕ್ಯಾಂಪ್ ಸೋಮವಾರ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಶಾಲಾ ದೇವಸ್ಥಾನದಲ್ಲಿರುವ ಸ್ವಾಮಿ ನಾರಾಯಣ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರವಾದ ಖಾಕಿ ಚಡ್ಡಿ, ಬಿಳಿ ಅಂಗಿ, ಕಪ್ಪು ಟೋಪಿ ಹಾಗೂ ಕಪ್ಪು ಶೂ ಹಾಕಿಸಲಾಗಿದೆ. ಈ ಫೋಟೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಇದೊಂದು ದುರದೃಷ್ಟಕರ ಘಟನೆ ಎಂದಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಾಮಿ ವಿಶ್ವ ಪ್ರಕಾಶ್ ಜಿ, ಭಕ್ತರೊಬ್ಬರು ಇದನ್ನು ಕಾಣಿಕೆಯಾಗಿ ನೀಡಿದ್ದು, ಅದನ್ನು ಸ್ವಾಮಿಯ ವಿಗ್ರಹಕ್ಕೆ ತೊಡಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗುತ್ತದೆಂಬುದರ ಅರಿವಿರಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಶಂಕರ್ ಸಿನ್ಹಾ ವಘೇಲಾ ಮಾತನಾಡಿ, ದೇವರ ವಿಗ್ರಹಕ್ಕೆ ಆರ್.ಎಸ್.ಎಸ್. ಸಮವಸ್ತ್ರ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ಬಿಜೆಪಿ ನಾಯಕ ವಿಜಯ್ ರೂಪಾನಿ, ಈ ಘಟನೆ ತಮಗೆ ಅಚ್ಚರಿಯನ್ನುಂಟು ಮಾಡಿದ್ದು, ಸಮವಸ್ತ್ರ ಹಾಕಿದ್ದನ್ನು ತಾವೂ ಒಪ್ಪುವುದಿಲ್ಲವೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


