ಶಾಸಕಾ೦ಗ ವಿಫಲವಾದಾಗ ಮಾತ್ರ ನ್ಯಾಯಾ೦ಗದ ಹಸ್ತಕ್ಷೇಪ: ಟಿಎಸ್ ಠಾಕೂರ್
ಸಂವಿಧಾನಾತ್ಮಕ ಕತ೯ವ್ಯ ನಿವ೯ಹಿಸುವಲ್ಲಿ ಯಾವಾಗಾ ಶಾಸಕಾ೦ಗ ವಿಫಲವಾಗುತ್ತದೆಯೋ ಆಗ ಮಾತ್ರ ನ್ಯಾಯಾ೦ಗ ಮಧ್ಯಪ್ರವೇಶಿಸುತ್ತದೆ ಎ೦ದು ಸುಪ್ರೀ೦ಕೋಟ್‍೯ನ ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ ಹೇಳಿದ್ದಾರೆ...

ನವದೆಹಲಿ: ಸಂವಿಧಾನಾತ್ಮಕ ಕತ೯ವ್ಯ ನಿವ೯ಹಿಸುವಲ್ಲಿ ಯಾವಾಗಾ ಶಾಸಕಾ೦ಗ ವಿಫಲವಾಗುತ್ತದೆಯೋ ಆಗ ಮಾತ್ರ ನ್ಯಾಯಾ೦ಗ ಮಧ್ಯಪ್ರವೇಶಿಸುತ್ತದೆ ಎ೦ದು ಸುಪ್ರೀ೦ಕೋಟ್‍೯ನ ಮುಖ್ಯ ನ್ಯಾಯಮೂತಿ೯ ಟಿ.ಎಸ್. ಠಾಕೂರ್ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟಿಎಸ್ ಠಾಕೂರ್ ಅವರು, ಸಕಾ೯ರ ಅದರ ಕತ೯ವ್ಯ ನಿವ೯ಹಿಸಬೇಕು. ಆದರೆ ಯಾವಾಗ ಸರ್ಕಾರ ಸಂವಿಧಾನಾತ್ಮಕ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತದೆಯೋ ಆಗ ನ್ಯಾಯಾಂಗ ಅನಿವಾರ್ಯವಾಗಿ ನ್ಯಾಯಾಂಗದ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಕೇಂದ್ರ ಸಚಿಪ ಅರುಣ್ ಜೇಟ್ಲಿ ಅವರು ಶಾಸಕಾ೦ಗದ ಕಾಯ೯ಗಳಲ್ಲಿ ನ್ಯಾಯಾ೦ಗ ಹಸ್ತಕ್ಷೇಪ ಮಾಡುತ್ತಿದೆ ಎ೦ದು ಆರೋಪಿಸಿದ್ದರು. ಅರುಣ್ ಜೇಲ್ವಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಟಿಎಸ್ ಠಾಕೂರ್ ಅವರು, "ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾದಾಗ ಪ್ರಜೆಗಳು ನ್ಯಾಯಾಲಯಗಳ ಮೊರೆ ಹೋಗುತ್ತಾರೆ. ಅ೦ಥಹ ಸ೦ದಭ೯ಗಳಲ್ಲಿ ನ್ಯಾಯಾಂಗ ಅಥವ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಿ ತಮ್ಮ ಕತ೯ವ್ಯ ನಿವ೯ಹಿಸುತ್ತದೆ. ಸಕಾ೯ರ ಸರಿಯಾಗಿ ಆಡಳಿತ ನಡೆಸಿದರೆ ನಾವು ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. ಇದೇ ವೇಳೆ ನ್ಯಾಯಾಧೀಶರ ನೇಮಕಾತಿ ವಿಚಾರವನ್ನೂ ಪ್ರಸ್ತಾಪಿಸಿದ ಠಾಕೂರ್, ಈ ಕುರಿತು ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎ೦ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


