ದೇಶ

ಇಸೀಸ್ ಧ್ವಜ ವಿನ್ಯಾಸ ಮಾಡಿದ ಆರೋಪ ಎದುರಿಸುತ್ತಿರುವವ್ಯಕ್ತಿ ಇಂಜಿನಿಯರಿಂಗ್ ಮಾಡಿದ್ದು ಚೆನ್ನೈನಲ್ಲಿ !

ಭಾರತದಲ್ಲಿ ಇಸೀಸ್ ಪರ ಕಾರ್ಯಾಚರಣೆ ನಡೆಸುತ್ತಿದ್ದ ಮೊಹಮ್ಮದ್ ನಸೀರ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು ಈತನ ಕುರಿತು ಮತ್ತಷ್ಟು ಮಾಹಿತಿ ದೊರೆತಿದೆ.

ಇಸೀಸ್ ಧ್ವಜ ವಿನ್ಯಾಸ ಮಾಡಿದ ಆರೋಪ ಎದುರಿಸುತ್ತಿರುವವ್ಯಕ್ತಿ ಇಂಜಿನಿಯರಿಂಗ್ ಮಾಡಿದ್ದು ಚೆನ್ನೈನಲ್ಲಿ !
ಮೊಹಮ್ಮದ್ ನಸೀರ್
Published On :

ನವದೆಹಲಿ: ಇಸೀಸ್ ಪರ ಕಾರ್ಯಾಚರಣೆ ನಡೆಸುತ್ತಿದ್ದ ಮೊಹಮ್ಮದ್ ನಸೀರ್ ವಿರುದ್ಧ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು ಈತನ ಕುರಿತು ಮತ್ತಷ್ಟು ಮಾಹಿತಿ ದೊರೆತಿದ್ದು, ಇಸೀಸ್ ಧ್ವಜ ವಿನ್ಯಾಸ ಮಾಡಿದ ಮೊಹಮ್ಮದ್ ನಸೀರ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು ಚೆನ್ನೈ ನಲ್ಲಿ ಎಂಬ ಮಾಹಿತಿ ಬಹಿರಂಗವಾಗಿದೆ. 
ಮೊಹಮ್ಮದ್ ನಸೀರ್ ನ ತಂದೆ ಅಮೀರ್ ಮೊಹಮ್ಮದ್ ಅವರ ಹೇಳಿಕೆಯ ಆಧಾರದಲ್ಲಿ ಎನ್ಐಎ ಚಾರ್ಜ್ ಶೀಟ್ ದಾಖಲಿಸಿದ್ದು, ಅಮೀರ್ ಮೊಹಮ್ಮದ್ ಅವರನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದೆ.  ಎನ್ಐಎ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿದ್ದು ಸುಡಾನ್ ಮೂಲಕ ಸಿರಿಯಾಗೆ ತೆರಳುವಾಗ ತನ್ನ ತಂದೆಗೆ ಇ-ಮೇಲ್ ಕಳಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.  ಮೊಹಮ್ಮದ್ ನಸೀರ್ ಹಾಗೂ ಆತನ ತಂದೆ ನಡುವೆ ನಡೆದಿದ್ದ ವಾಟ್ಸ್ ಆಪ್ ಹಾಗೂ ಇ-ಮೇಲ್ ಸಂಪರ್ಕ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಲು ಸಹಕಾರಿಯಾಗಿದ್ದು, ಮೊಹಮ್ಮದ್ ನಸೀರ್ ತಾನು ಇಸೀಸ್ ಉಗ್ರ ಸಂಘಟನೆ ಸೇರಿರುವುದಾಗಿ ತಿಳಿಸಿದ್ದ ಎಂದು ಚಾರ್ಜ್ ಶೀಟ್ ಮೂಲಕ ತಿಳಿದುಬಂದಿದೆ. ಚೆನ್ನೈ ನ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ಬಳಿಕ 2014 ರಲ್ಲಿ ಕೆಲಸ ಅರಸಿ ದುಬೈ ಗೆ ತೆರಳಿದ್ದ ನಸೀರ್, ದುಬೈ ನ ಕಂಪನಿಯೊಂದರಲ್ಲಿ ವೆಬ್ ಡೆವಲಪರ್ ಹಾಗೂ ಗ್ರಾಫ್ರಿಕ್ ವಿನ್ಯಾಸಗಾರನಾಗಿ ಕಾರ್ಯನಿರ್ವಹಿಸಿದ್ದ, ದುಬೈ ನಲ್ಲಿರಬೇಕಾದರೆ ಇಸೀಸ್ ಪರ ವಿಡಿಯೋಗಳನ್ನು ನೋಡಿ ಉಗ್ರ ಸಂಘಟನೆಯತ್ತ ಆಕರ್ಷಿತನಾಗಿ ಸುಡಾನ್ ಮೂಲಕ ಸಿರಿಯಾಗೆ ತೆರಳಿದ್ದ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.