ದೇಶ

ದಕ್ಷಿಣ ಮುಂಬೈ: ಕೊಲಾಬಾ ಕಾಸ್ ವೇಯ ಕಟ್ಟಡದಲ್ಲಿ ಬೆಂಕಿ

ದಕ್ಷಿಣ ಮುಂಬೈಯ ವಾಣಿಜ್ಯ ಪ್ರದೇಶವಾದ ಕೊಲಬಾ ಕಾಸ್ ವೇಯಲ್ಲಿರುವ ಕಟ್ಟಡವೊಂದರಲ್ಲಿ...

ದಕ್ಷಿಣ ಮುಂಬೈ: ಕೊಲಾಬಾ ಕಾಸ್ ವೇಯ ಕಟ್ಟಡದಲ್ಲಿ ಬೆಂಕಿ
ಕೊಲಬಾ ಕಾಸ್ ವೇಯ ಕಟ್ಟಡದಲ್ಲಿ ಕಾಣಿಸಿಕೊಂಡ ಹೊಗೆಯ ಫೋಟೋ ಟ್ವಿಟ್ಟರ್ ನಲ್ಲಿ ಹಾಕಿದ ಬಳಕೆದಾರರು
Published On :

ಮುಂಬೈ: ದಕ್ಷಿಣ ಮುಂಬೈಯ ವಾಣಿಜ್ಯ ಪ್ರದೇಶವಾದ ಕೊಲಬಾ ಕಾಸ್ ವೇಯಲ್ಲಿರುವ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಆಕಸ್ಮಿಕವುಂಟಾಗಿದೆ.ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಬೆಂಕಿಗಾಹುತಿಯಾಗುವುದರಿಂದ ಇಬ್ಬರನ್ನು ನಾವು ರಕ್ಷಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಶರ್ಮಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕೆಫೆ ಮೊಂಡೆಗಾರ್ ಮತ್ತು ಮೆಕ್ ಡೊನಾಲ್ಡ್ ಮಳಿಗೆಗಳನ್ನು ಹೊಂದಿದ ಬಹುಮಹಡಿ ಮೆಟ್ರೋ ಕಟ್ಟಡದಿಂದ ಭಾರೀ ಪ್ರಮಾಣದ ಹೊಗೆ ಹೊರಗೆ ಬರುತ್ತಿತ್ತು. ಮುಂಬೈಯ ಪ್ರತಿಷ್ಠಿತ ರೀಗಲ್ ಸಿನೆಮಾ ಹಾಲ್ ಗೆ ಬಲು ಹತ್ತಿರದಲ್ಲಿ ಈ ಕಟ್ಟಡವಿದೆ.

ಕಟ್ಟಡದ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲೆಲ್ಲಾ ಹರಡಿತು. ಹೊಗೆಯನ್ನು ನಂದಿಸಲು 12 ಅಗ್ನಿಶಾಮಕ ಎಂಜಿನ್ ಗಳು ಸ್ಥಳಕ್ಕೆ ಧಾವಿಸಿವೆ.
ಕೊಲಬಾ ಕಾಸ್ ವೇಯಲ್ಲಿರುವ ಸಂಕೀರ್ಣದಲ್ಲಿ ನೂರಾರು ಮಳಿಗೆಗಳು ಮತ್ತು ವಸತಿಗಳಿವೆ. ಕಟ್ಟಡದಿಂದ ಹೊಗೆ ಹೊರಬರುತ್ತಿರುವುದನ್ನು ನೋಡಿದ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.