ಆಮಿರ್ ಖಾನ್ ವಿರುದ್ಧ ಪರಿಕ್ಕರ್ ಪರೋಕ್ಷ ವಾಗ್ದಾಳಿಗೆ ರಾಹುಲ್ ಗಾಂಧಿ ತಿರುಗೇಟು
ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ನವದೆಹಲಿ: ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ದೇಶದ ವಿರುದ್ಧ ಮಾತನಾಡುವವರು ಸಾಮರಸ್ಯ ಕದಡುವ ಯತ್ನ ಮಾಡುತ್ತಿದ್ದು, ಅವರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂಬ ಮನೋಹರ್ ಪರಿಕ್ಕರ್ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ಸಾಮರಸ್ಯ ಕದಡುವ ಯತ್ನ ಮಾಡುತ್ತಿರುವವರಿಗೆ ಪಾಠ ಮಾಡುವವರಿಗೆ ಇಲ್ಲೊಂದು ಪಾಠವಿದೆ. ಅದೇನೆಂದರೆ ದ್ವೇಷ ಎಂಬುದು ಹೇಡಿತನದ ಲಕ್ಷಣವಾಗಿದ್ದು ಅದು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂಬ ಪಾಠ ಕಲಿಯಲಿ ಎಂದು ಹೇಳಿದ್ದಾರೆ.
ಸಿಯಾಚಿನ್ ಎಂಬ ಪುಸ್ತಕದ ಮರಾಠಿ ಅವತರಣಿಕೆ ಬಿಡುಗಡೆ ಮಾಡಿ ಮಾತನಾಡಿದ ಪರಿಕ್ಕರ್, ನಟನೊಬ್ಬ ದೇಶ ಬಿಟ್ಟು ಹೋಗುವುದಾಗಿ ಹೇಳುತ್ತಾರೆ, ಇದು ಉದ್ಧಟತನದ ಹೇಳಿಕೆ, ಮನೆ ಎಷ್ಟೆ ಚಿಕ್ಕದಿದ್ದರೂ ಮನೆ ತೊರೆಯುವ ಮಾತನ್ನಾಡದೆ, ಇರುವ ಜಾಗದಲ್ಲೆ ಬಂಗಲೆ ಕಟ್ಟುವ ಕನಸು ಕಾಣಬೇಕು ಎಂದು ಆಮಿರ್ ಖಾನ್ ಹೆಸರು ಹೇಳದೆ ಪರೋಕ್ಷವಾಗಿ ಚಾಟಿ ಬೀಸಿದ್ದರು. ಆಮಿರ್ ಖಾನ್ ಅವರು ಕಳೆದ ನವಂಬರ್ನಲ್ಲಿ ದೇಶದಲ್ಲಿ ಅಸಹಿಷ್ಣತೆ ಇದೆ ಆದ್ದರಿಂದ ಹೆಂಡತಿ ದೇಶ ತೊರೆಯಲು ಸಲಹೆ ನೀಡಿದ್ದಾಳೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


