ದೇಶ

ರೈತನ ಸಮಯ ಪ್ರಜ್ಞೆಯಿಂದ ತಪ್ಪಿತು ಬಹುದೊಡ್ಡ ರೈಲು ದುರಂತ

ರೈತನೊಬ್ಬನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಬಹು ದೊಡ್ಡ ರೈಲು ದುರಂತ ತಪ್ಪಿದೆ...

ರೈತನ ಸಮಯ ಪ್ರಜ್ಞೆಯಿಂದ ತಪ್ಪಿತು ಬಹುದೊಡ್ಡ ರೈಲು ದುರಂತ
ಹಾನಿಗೊಳಗಾಗಿರುವ ರೈಲ್ವೆ ಹಳಿ
Published On :

ವಿಲ್ಲುಪುರಂ: ರೈತನೊಬ್ಬನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಬಹು ದೊಡ್ಡ ರೈಲು ದುರಂತ ತಪ್ಪಿದೆ.

ನೆಡಿ ಗ್ರಾಮದ ಕುರಿ ಕಾಯುವವರು ಮತ್ತು ದನಗಾಹಿಗಳು ಪ್ರತಿ ನಿತ್ಯ ಹಳಿ ದಾಟಿಕೊಂಡು ಹೋಗಿ ತನ್ನ ಜಾನವಾರುಗಳನ್ನು ಮೇಯಿಸಲು ಹೋಗುತ್ತಿದ್ದರು. ಈ ವೇಳೆ ರೈಲಿನ ಸದ್ದು ಕೇಳಿ ಹೆದರಿದ ಜಾನುವಾರುಗಳು ದಿಕ್ಕಪಾಲಾಗಿ ರಭಸದಿಂದ ಓಡಿ ಹೋಗುತ್ತಿದ್ದವು. ಈ ವೇಳೆ ಪ್ರಾಣಿಗಳ ರಭಸಕ್ಕೆ ಹಳಿಯ ಪಕ್ಕದ ಮಣ್ಣಿನ ಜಾಗದಲ್ಲಿ ಕಂದಕ ಸೃಷ್ಟಿಯಾಗಿತ್ತು.

ರೈಲ್ವೆ ಇಲಾಖೆ ಗ್ರಾಮಸ್ಥರಿಗೆ ಬೇರೊಂದು ಮಾರ್ಗ ನಿರ್ಮಿಸುತ್ತಿದ್ದು, ಕಳೆದ ಒಂದು ವರ್ಷದಿಂದ ಕಾಮಗಾರಿ ಸಾಗುತ್ತಿದೆ.

ಮಂಗಳವಾರ ಬೆಳಗ್ಗೆ ಜೆಗನ್ ಎಂಬ ರೈತ ಯಾವುದೋ ಕೆಲಸ ನಿಮಿತ್ತ ರೈಲು ಹಳಿಯತ್ತ ಬಂದಿದ್ದಾರೆ. ಈ ವೇಳೆ ಧಾರಾಕಾರ ಮಳೆಯಿಂದ ರೈಲ್ವೆ ಹಳಿ ಪಕ್ಕದ ಮಣ್ಣಿ ಹಾಗೂ ಕಾಂಕ್ರೀಟ್ ಕೊಚ್ಚಿ ಹೋಗಿರುವುದನ್ನು ಗಮನಿಸಿದ್ದಾರೆ. ಹಳಿಗೆ ಯಾವುದೇ ಸಪೋರ್ಟ್ ಇಲ್ಲದ್ದನ್ನು ಗಮನಿಸಿ ಅಕ್ಕ ಪಕ್ಕದ ಗ್ರಾಮಸ್ಥರನ್ನು ಕರೆದಿದ್ದಾರೆ.

ಈ ವೇಳೆ ವಿಲ್ಲುಪುರಂ - ತಾಂಬರಂ ಪ್ಯಾಸೆಂಜರ್ ರೈಲು ಹಾನಿಗೊಳಗಾದ ರೈಲ್ವೆ ಹಳಿಯ ಸಮೀಪಿಸುತ್ತಿತ್ತು. ಈ ವೇಳೆ ಗ್ರಾಮಸ್ಥರು ರೈಲು ನಿಲ್ಲಿಸುವಂತೆ ಸಿಗ್ನಲ್ ನೀಡಿದ್ದಾರೆ. ಇದನ್ನು ಗಮನಿಸಿದ ಚಾಲಕ ರೈಲನ್ನು ನಿಲ್ಲಿಸಿದ್ದಾನೆ.

ನಂತರ ಕೆಳಗಿಳಿದು ಹಾನಿಯಾಗಿರುವ ರೈಲ್ವೆ ಹಳಿಯ ಫೋಟೋ ತೆಗೆದು ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾನೆ. ನಂತರ ಹಿರಿಯ ಅಧಿಕಾರಿಗಳ ಸೂಚನೆಯಂತೆ ನಿಧಾನವಾಗಿ ಹಾನಿಗೊಳಗಾದ ರೈಲ್ವೆ ಹಳಿಯನ್ನು ದಾಟಿದ್ದಾನೆ. ನಂತರ ಬಂದ ಕೆಲಸಗಾರರು ರೈಲ್ವೆ ಹಳಿ ರಿಪೇರಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.