ಮಕ್ಕಳ ಅಶ್ಲೀಲ ವೆಬ್ ಸೈಟ್ ನಡೆಸಿ, ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದ ದಂಪತಿ ಬಂಧನ
ಐದು ವರ್ಷಗಳಿಂದ ಮಕ್ಕಳ ಅಶ್ಲೀಲ ವೆಬ್‌ಸೈಟ್ ನಡೆಸುತ್ತಿದ್ದ ದಂಪತಿಯನ್ನು ಚೆನ್ನೈನ ಪೊಲೀಸರು ಬಂಧಿಸಿದ್ದಾರೆ...

ಚೆನ್ನೈ: ಐದು ವರ್ಷಗಳಿಂದ ಮಕ್ಕಳ ಅಶ್ಲೀಲ ವೆಬ್‌ಸೈಟ್ ನಡೆಸುತ್ತಿದ್ದ ದಂಪತಿಯನ್ನು ಚೆನ್ನೈನ ಪೊಲೀಸರು ಬಂಧಿಸಿದ್ದಾರೆ.
ಸಿದ್ಧಾತ್ತ ವೇಲು ಮತ್ತು ಪ್ರಿಸಿಲ್ಲಾ ಮಾರ್ಗರೆಟ್ ಧನರಾಜ್ ಬಂಧಿತ ದಂಪತಿ. ಇವರಿಬ್ಬರು 2 ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಅದರಲ್ಲಿ ಮಕ್ಕಳ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ವೆಬ್‌ಸೈಟ್ ವೀಕ್ಷಿಸಲು ಜನರಿಗೆ ಸದಸ್ಯತ್ವ ನೀಡಿ ಇಂತಿಷ್ಟು ಹಣ ಅಂತಾ ವಸೂಲಿ ಮಾಡುತ್ತಿದ್ದರು.
ಮಕ್ಕಳ ಪೊರ್ನ್ ವಿಡಿಯೋ, ಫೋಟೊ ವೀಕ್ಷಣೆಗೆ ಜನ ಅಪಾರ ಹಣ ನೀಡಿದ್ದಾರೆ. ಬೆಂಗಳೂರಿನ ಬ್ಯಾಂಕ್‌ವೊಂದರಲ್ಲಿ ಸಿದ್ಧಾತ್ತ ವೇಲು ಅವರ ಅಕೌಂಟ್ ಇದ್ದು, ಆ ಅಕೌಂಟ್‌ಗೆ 2.4 ಕೋಟಿ ಹಣ ಸಂದಾಯವಾಗಿದೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಾಗಿದ್ದು, ಮೂಲತ ತಿರುಚ್ಚಿಯವರಾದ ಇವರು ಶೋಲಿಂಗನಲ್ಲೂರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಅಮೆರಿಕಾ, ಕೆನಡಾ ಮೂಲದ ಹೆಚ್ಚಿನ ಜನರು ಇವರ ಪೋರ್ನ್ ಸೈಟ್ ನಲ್ಲಿ ಸದಸ್ಯರಾಗಿದ್ದಾರೆ. ಬೇರೆ ಬೇರೆ ಸೈಟ್ ಗಳಿಂದ ಫೋಟೋಗಳನ್ನು ತೆಗೆದು ಅಪ್ ಲೋಡ್ ಮಾಡುತ್ತಿದ್ದ ದಂಪತಿ, ಸದಸ್ಯತ್ವ ಪಡೆಯಲು ಇಚ್ಚಿಸುವವರು ತಮ್ಮ ಇ-ಮೇಲ್ ಐಡಿ ಸಂಪರ್ಕಿಸುವಂತೆ ವಿಳಾಸ ನೀಡಿದ್ದರು. ಈ ದಂಪತಿ ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಹೀಗಾಗಿ ಇವರ ಚಟುವಟಿಕೆಗಳ ಬಗ್ಗೆ ನೆರೆಹೊರೆಯವರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


