ದೇಶ

ಕಣ್ಮರೆಯಾಗಿರುವ ಐಎಎಫ್ ವಿಮಾನದಲ್ಲಿ ಕರ್ನಾಟಕದ ಯೋಧ

ಬಂಗಾಳಕೊಲ್ಲಿಯಲ್ಲಿ ನಿನ್ನೆ ಕಣ್ಮರೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನದಲ್ಲಿ ಕರ್ನಾಟಕದ ಬೆಳ್ತಂಗಡಿಯ ಯೋಧರೊಬ್ಬರು ಸೇರಿದ್ದಾರೆ.

ಕಣ್ಮರೆಯಾಗಿರುವ ಐಎಎಫ್ ವಿಮಾನದಲ್ಲಿ ಕರ್ನಾಟಕದ ಯೋಧ
ಕಣ್ಮರೆಯಾಗಿರುವ ವಿಮಾನದ ಶೋಧದಲ್ಲಿ ತೊಡಗಿರುವ ರಕ್ಷಣಾ ಪಡೆ
Published On :
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ನಿನ್ನೆ ಕಣ್ಮರೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನದಲ್ಲಿ ಕರ್ನಾಟಕದ ಬೆಳ್ತಂಗಡಿಯ ಸೇನಾಧಿಕಾರಿಯೊಬ್ಬರು ಸೇರಿದ್ದಾರೆ.
ಚೆನ್ನೈನ ತಾಂಬರಂ ವಾಯು ಸೇನೆ ನಿಲ್ದಾಣದಿಂದ ಪೋರ್ಟ್ ಬ್ಲೇರ್ ಗೆ ಪಯಣಿಸುತ್ತಿದ್ದ ವಿಮಾನದಲ್ಲಿ 29 ಮಂದಿ ಇದ್ದರು. ಇದರಲ್ಲಿ ಆರು ಮಂದಿ ವಿಮಾನ ಸಿಬ್ಬಂದಿ, 11 ವಾಯು ಪಡೆ ಸಿಬ್ಬಂದಿ, ಇಬ್ಬರು ಭೂ ಸೇನೆ ಯೋಧರು, ಒಬ್ಬ ಕರಾವಳಿ ರಕ್ಷಣಾ ಪಡೆಯ ನಾವಿಕ, ಓರ್ವ ನಾವಿಕ ಮತ್ತು ಎಂಟು ಮಂದಿ ನೌಕಾ ಪಡೆ ಸಿಬ್ಬಂದಿ ಇದ್ದರು ಎಂದು ವಾಯು ಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ. 
ಕಣ್ಮರೆಯಾಗಿರುವ ವಿಮಾನದಲ್ಲಿ ಬೆಳ್ತಂಗಡಿ ಗುರುವಾಯನಕೆರೆಯ ಭಾರತೀಯ ಸೇನೆಯ ಅಧಿಕಾರಿ ಏಕನಾಥ ಶೆಟ್ಟಿ ಸಹ ಇದ್ದರು. ಕಣ್ಮರೆಯಾಗಿರುವ ವಿಮಾನದ ಪತ್ತೆಗಾಗಿ ವಾಯುಪಡೆ, ನೌಕಾಪಡೆ, ಕರಾವಳಿ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.