ಮಗನನ್ನು ಶ್ರೀಸಾಮಾನ್ಯನಂತೆ ದುಡಿಯಲು ಕಳಿಸಿದ ಕೋಟ್ಯಾಧಿಪತಿ!
ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ....

Published On :
ಕೊಚ್ಚಿ: ಕೋಟ್ಯಾಧಿಪತಿ ತಂದೆಯೊಬ್ಬರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದ ತನ್ನ ಏಕೈಕ ಮಗನನ್ನು ಶ್ರೀಸಾಮಾನ್ಯನಂತೆ ತಿಂಗಳ ಸಂಬಳಕ್ಕಾಗಿ ದುಡಿಯುವಂತೆ ಕೇರಳಕ್ಕೆ ಕಳಿಸಿದ್ದಾರೆ!
ಹೌದು. ಇದು ಅಚ್ಚರಿಯನಿಸಿದರು ನಿಜ. ವಿಶ್ವದ ಸುಮಾರು 71 ದೇಶಗಳಲ್ಲಿ ಕಂಪನಿ ಹೊಂದಿರುವ ಸೂರತ್ ಮೂಲದ ಗುಜರಾತಿ ವಜ್ರ ವ್ಯಾಪಾರಿ ಸಾವಜಿ ಢೋಲಕಿಯ ಅವರು ತಮ್ಮ ಮಗನಾದ ದ್ರವ್ಯ ಢೋಲಕಿಯ (21)ರನ್ನು ತಿಂಗಳ ಸಂಬಳಕ್ಕೆ ದುಡಿಯಲು ಕಳುಹಿಸಿದ್ದಾರೆ.
ಅಮೆರಿಕದಲ್ಲಿ ಎಮ್ಬಿಎ ವ್ಯಾಸಂಗ ಮಾಡುತ್ತಿರುವ ದ್ರವ್ಯ ಈಗ ರಜಾ ದಿನಗಳನ್ನು ಕಳೆಯಲು ಭಾರತಕ್ಕೆ ಬಂದಿದ್ದಾರೆ. ಆದರೆ ಅವರ ತಂದೆ ರಜಾ ಅವಧಿಯಲ್ಲಿ ಎಲ್ಲಿಯಾದರೂ ಕೆಲಸ ಮಾಡು ಅಂತ ಹೇಳಿ, ಮೂರು ಜತೆ ಬಟ್ಟೆ ಮತ್ತು ತುರ್ತು ಸಂದರ್ಭಕ್ಕಾಗಿ 7 ಸಾವಿರ ಹಣ ಕೈಯಲ್ಲಿಟ್ಟು ಕಳಿಸಿದ್ದಾರೆ.
ನಾನು ನನ್ನ ಪುತ್ರನಿಗೆ ಮೂರು ಷರತ್ತುಗಳನ್ನು ವಿಧಿಸಿದ್ದು, ಎಲ್ಲಿಯೂ ಸಹ ನನ್ನ ಹೆಸರು ಬಳಸದೆ, ಫೋನ್ ಕೂಡ ಬಳಕೆ ಮಾಡದೆ ಒಂದೇ ಜಾಗದಲ್ಲಿ ಒಂದು ವಾರಕ್ಕಿಂತ ಹೆಚ್ಚು ದಿನ ಇರದೆ ಬೇರೆ ಬೇರೆ ಕಡೆ ಒಂದು ತಿಂಗಳು ಕೆಲಸ ಮಾಡಿ ಸಂಬಳ ಪಡೆದು ಮರಳಬೇಕೆಂದು ಮಗನಿಗೂ ಸೂಚಿಸಿರುವುದಾಗಿ ಸಾವಜಿ ಢೋಲಕಿಯಾ ಅವರು ಹೇಳಿದ್ದಾರೆ.
ಸಾಮಾನ್ಯ ಜನರ ಕಷ್ಟ, ಬವಣೆ ಅರಿತು ಹಣದ ಮೌಲ್ಯದ ಬಗ್ಗೆ ತಿಳುವಳಿಕೆ ಬರಲಿ ಎಂದು ಈ ರೀತಿ ಮಾಡಿರುವುದಾಗಿ ಹರೆ ಕೃಷ್ಣ ವಜ್ರ ವ್ಯಾಪಾರ ಕಂಪನಿ ಮಾಲಿಕ ಸಾವಜಿ ಢೋಲಕಿಯ ತಿಳಿಸಿದ್ದಾರೆ.
ಮೊದಲ 6 ದಿನ ಕೆಲಸ ಸಿಗದೆ ಒದ್ದಾಡಿದ್ದ ದ್ರವ್ಯ ನಂತರ ಕಾಲ್ ಸೆಂಟರ್, ಶೂ ಮಾರ್ಟ್, ಮೆಕ್ಡೊನಾಲ್ಡ್ನಲ್ಲಿ ಕೆಲಸ ಮಾಡಿ ದಿನಕ್ಕೆ 250 ರುಪಾಯಿ ಬಾಡಿಗೆಯ ಲಾಡ್ಜ್ನಲ್ಲಿ ನೆಲೆಸಿ ಊಟಕ್ಕೆ ಪರದಾಡಿ ಕಡೆಗೂ ಕಷ್ಟ ಅಂದರೆ ಏನೆಂದು ಅರಿತುಕೊಂಡು ಬಳಿಕ ಸೂರತ್ನ ತನ್ನ ಮನೆಗೆ ವಾಪಸಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


