ಸಿಕ್ಕಿ ಬಿದ್ದ ಪಾಕಿಸ್ತಾನ: ಐಎಸ್ಐ ನೊಂದಿಗೆ ಹಫೀಜ್ ಸಯೀದ್ ನ ಸಂಬಂಧದ ಬಗೆಗಿನ ಫೋಟೋ ಬಯಲು!
ಭಯೋತ್ಪಾದನೆ ಬಗ್ಗೆ ಪಾಕಿಸ್ತಾನದ ಮೃದು ಧೋರಣೆ ಅನುಸರಿಸುತ್ತಿರುವುದಕ್ಕೆ ಮತ್ತಷ್ಟು ಪುರಾವೆ ದೊರೆತಿದೆ.

ದೆಹಲಿ: ಭಯೋತ್ಪಾದನೆ ಬಗ್ಗೆ ಪಾಕಿಸ್ತಾನದ ಮೃದು ಧೋರಣೆ ಅನುಸರಿಸುತ್ತಿರುವುದಕ್ಕೆ ಮತ್ತಷ್ಟು ಪುರಾವೆ ದೊರೆತಿದ್ದು, ಐಎಸ್ಐ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸುತ್ತಿರುವುದನ್ನು ಸಾಬೀತುಪಡಿಸುವಂತಹ ಕೆಲವು ಚಿತ್ರಗಳು ಬಹಿರಂಗವಾಗಿವೆ.
ಇಂಡಿಯಾ ಟುಡೆ ಪ್ರಕಟ ಮಾಡಿರುವ ವರದಿಯ ಪ್ರಕಾರ, ಹಪೀಜ್ ಸಯೀದ್ ನೊಂದಿಗೆ ಫೋಟೋ ಒಂದರಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೋರ್ವ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಜಂಜುವಾ ಅವರೊಂದಿಗೆ ಗುರುತಿಸಿಕೊಂಡಿರುವ ಫೋಟೋ ಬಹಿರಂಗವಾಗಿದೆ. ಹಫೀಜ್ ಸಯೀದ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಜಂಜುವಾ ಅವರೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿ ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಹಮೀದ್ ಗುಲ್ ನ ಪುತ್ರ ಅಬ್ದುಲ್ಲಾ ಗುಲ್ ಎಂದು ತಿಳಿದುಬಂದಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಪಾಕಿಸ್ತಾನ ಹಲವು ಭಾರತ ವಿರೋಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಗಳಲ್ಲಿ ಹಫೀಜ್ ಸಯೀದ್ ಹಾಗೂ ಐಎಸ್ಐ ನ ಮಾಜಿ ಮುಖ್ಯಸ್ಥ ಹಮೀದ್ ಗುಲ್ ನ ಪುತ್ರ ಅಬ್ದುಲ್ಲಾ ಗುಲ್ ಸಹ ಭಾಗವಹಿಸಿರುವುದು ಬಹಿರಂಗವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


