ಅಂತಿಮ ಪಯಣಕ್ಕೆ ಸಜ್ಜಾದ ಐಎನ್ಎಸ್ ವಿರಾಟ್!
ಭಾರತೀಯ ಸೇನೆಯ ಹೆಮ್ಮೆ ಪ್ರಬಲ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಇದೇ ವರ್ಷಾಂತ್ಯದಲ್ಲಿ ನಿವೃತ್ತಿಯಾಗುತ್ತಿದ್ದು, ತನ್ನ ಕೊನೆಯ ಪಣಯಕ್ಕೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ...

ನವದೆಹಲಿ: ಭಾರತೀಯ ಸೇನೆಯ ಹೆಮ್ಮೆ ಪ್ರಬಲ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಇದೇ ವರ್ಷಾಂತ್ಯದಲ್ಲಿ ನಿವೃತ್ತಿಯಾಗುತ್ತಿದ್ದು, ತನ್ನ ಕೊನೆಯ ಪಣಯಕ್ಕೆ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ.
ಭಾರತೀಯ ಸೇನಾ ಮೂಲಗಳ ಪ್ರಕಾರ ಇದೇ ಜುಲೈ 23ರಿಂದ 27ರವರೆಗೆ ಮುಂಬೈನಲ್ಲಿರುವ ಪಶ್ಚಿಮ ನೌಕಾ ನೆಲೆಯಿಂದ ಕೊಚ್ಚಿನ್ ನಲ್ಲಿರುವ ದಕ್ಷಿಣ ನೌಕಾನೆಲೆಯತ್ತ ಐಎನ್ ಎಸ್ ವಿರಾಟ್ ಪಯಣ ಆರಂಭಿಸಲಿದ್ದು, ಇದೇ ಅಂತಿಮ ಪಯಣವಾಗಲಿದೆ ಎಂದು ತಿಳಿದುಬಂದಿದೆ. ಈ ಪಯಣದ ಬಳಿಕ ಐಎನ್ ಎಸ್ ವಿರಾಟ್ ಸೇನೆಯಿಂದ ನಿವೃತ್ತಿಯಾಗಲಿದ್ದು, ಬಳಿಕ ಒಂದಷ್ಟು ದಿನಗಳ ಕಾಲ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
1959ರ ನವೆಂಬರ್ 18 ರಂದು ಮೊದಲ ಬಾರಿಗೆ ಬ್ರಿಟೀಷ್ ರಾಯಲ್ ನೇವಿ ಹೆಎಂಎಸ್ ಹರ್ಮ್ಸ್ ಹೆಸರಿನಲ್ಲಿ ಈ ನೌಕೆಯನ್ನು ಸೇನೆಗೆ ನಿಯೋಜಿಸಿತ್ತು. ಬಳಿಕ ಭಾರತೀಯ ಸೇನೆಗೆ ಸೇರ್ಪಡೆಯಾದ ನೌಕೆಗೆ ಐಎನ್ ಎಸ್ ವಿರಾಟ್ ಮರು ನಾಮಕರಣ ಮಾಡಿ ಸೇನೆಗೆ ನಿಯೋಜಿಸಲಾಯಿತು. ಇದೀಗ ಈ ನೌಕೆಯ ನಿರ್ವಹಣೆ ದುಬಾರಿಯಾಗುತ್ತಿರುವ ಹಿನ್ನಲೆಯಲ್ಲಿ ನೌಕೆಯನ್ನು ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿರುವ ಹಿರಿಯ ನೌಕಾ ಆಧಿಕಾರಿಯೊಬ್ಬರು, ನೌಕೆಯ ಎಂಜಿನ್ ತುಂಬಾ ಹಳೆಯದಾಗಿದೆ. ಅಲ್ಲದೆ ಇವುಗಳ ಬಿಡಿಭಾಗಗಳ ನಿರ್ವಹಣೆ ಕೂಡ ದುಬಾರಿಯಾಗುತ್ತಿದೆ. ಹೀಗಾಗಿ ನೌಕೆಯನ್ನು ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಇದೇ ಐಎನ್ ಎಸ್ ವಿಕ್ರಮಾಧಿತ್ಯದ ಶೌಚಾಲಯದ ಟ್ಯಾಂಕ್ ಅನ್ನು ದುರಸ್ತಿಗೊಳಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಓರ್ವ ಇಂಜಿನಿಯರ್ ಮೃತಪಟ್ಟಿದ್ದ. ಅಲ್ಲದೆ ಘಟನೆಯಲ್ಲಿ ಇತರೆ ಮೂವರು ಕಾರ್ಮಿಕರು ಗಾಯಗೊಂಡಿದ್ದರು.
ನಿವೃತ್ತಿ ಬಳಿಕ ಐಎನ್ ಎಸ್ ವಿರಾಟ್ ಯುದ್ಧ ನೌಕೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ಪ್ರಸ್ತಾವನೆ ಇದೆಯಾದರೂ, ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


