ನಕ್ಸಲ್ ದಾಳಿಯಲ್ಲಿ ಯೋಧ ದಿವಾಕರ್ ಹುತಾತ್ಮ: ಮದುವೆಯಾಗಿ 21 ದಿನಕ್ಕೆ ವಿಧವೆಯಾದ ಪತ್ನಿ
ಬಿಹಾರದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಸಿಆರ್ಪಿಎಫ್ ಯೋಧರ ಪೈಕಿ ದಿವಾಕರ್ ಒಬ್ಬರಾಗಿದ್ದು, ಅವರಿಗೆ ಮದುವೆಯಾಗಿ ಆಗಷ್ಟೇ 21 ದಿನವಾಗಿತ್ತು...

ಖಗರಿಯಾ: ಬಿಹಾರದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ 10 ಸಿಆರ್ಪಿಎಫ್ ಯೋಧರ ಪೈಕಿ ದಿವಾಕರ್ ಒಬ್ಬರಾಗಿದ್ದು, ಅವರಿಗೆ ಮದುವೆಯಾಗಿ ಆಗಷ್ಟೇ 21 ದಿನವಾಗಿತ್ತು.
ಹುತಾತ್ಮ ಯೋಧ ದಿವಾಕರ್ ಮತ್ತು ಪ್ರಿಯಾ ಮದುವೆ ಜೂನ್ 27ಕ್ಕೆ ನಡೆದಿತ್ತು. ಮದುವೆ ಬಳಿಕ ಕೆಲಸಕ್ಕೆ ಸೇರಿದ್ದ ದಿವಾಕರ್ ಸೋಮವಾರ ರಾತ್ರಿ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದರು. ಮದುವೆಯಾಗಿ 21 ದಿನಕ್ಕೆ ಪತಿಯನ್ನು ಕಳೆದುಕೊಂಡ ಪ್ರಿಯಾ ಕಣ್ಣೀರಿನಲ್ಲಿ ಮುಳುಗಿದ್ದು, ಮನೆಗೆ ಆಸೆಯಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ತನುಕಲಾಲ್ ಅವರಿಗೆ ಐದು ಜನ ಮಕ್ಕಳಿದ್ದು, ದಿವಾಕರ್ ಒಬ್ಬನೇ ಮಗನಾಗಿದ್ದ. ದಿವಾಕರ್ ನಂತರ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಅವರ ಮದುವೆ ಚಿಂತೆ ಇದೀಗ ತಂದೆ ತನುಕಲಾಲ್ ಅವರಿಗೆ ಕಾಡುತ್ತಿದೆ.
ಬಿಹಾರದ ಗಯಾ ಮತ್ತು ಔರಂಗಾಬಾದ್ ಜಿಲ್ಲೆಯ ಗಡಿ ಭಾಗ ದುಮ್ರಿ ನಲ್ಲಾ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹೂತಿಟ್ಟಿದ್ದ ನೆಲಬಾಂಬ್ ಸ್ಪೋಟಗೊಂಡು 10 ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


