ವಾಟರ್ ಮೀಟರ್ ಹಗರಣ: ಶೀಲಾ ದೀಕ್ಷಿತ್ ಸ್ಪಷ್ಟನೆಗೆ ಬಿಜೆಪಿ ಆಗ್ರಹ
ಬಹುಕೋಟಿ ವಾಟರ್ ಮೀಟರ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಶೀಲಾ ದೀಕ್ಷಿತ್ ಅವರಿಗೆ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಪ್ರಕರಣ ಸಂಬಂಧ...

ನವದೆಹಲಿ: ಬಹುಕೋಟಿ ವಾಟರ್ ಮೀಟರ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಶೀಲಾ ದೀಕ್ಷಿತ್ ಅವರಿಗೆ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ ಪ್ರಕರಣ ಸಂಬಂಧ ಸ್ಪಷ್ಟನೆ ನೀಡುವಂತೆ ಶೀಲಾ ದೀಕ್ಷಿತ್ ಅವರಿಗೆ ಗುರುವಾರ ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಆರ್.ಪಿ. ಸಿಂಗ್ ಅವರು, ರು.400 ಕೋಟಿ ವಾಟರ್ ಮೀಟರ್ ಹಗರಣದಲ್ಲಿ ಶೀಲಾ ದೀಕ್ಷಿತ್ ಅವರು ಭಾಗಿಯಾಗಿರುವುದು ಖಚಿತವೆಂದು ಪಕ್ಷ ವಿಶ್ವಾಸ ವ್ಯಕ್ತಪಡಿಸುತ್ತಲೇ ಬಂದಿದೆ. ಪ್ರಕರಣದಲ್ಲಿ ಶೀಲಾ ದೀಕ್ಷಿತ್ ಭಾಗಿಯಾಗಿರುವುದಾಗಿ ಈ ಹಿಂದಿನಿಂದಲೂ ಪಕ್ಷ ಹೇಳುತ್ತಲೇ ಬಂದಿದೆ. ಇದೀಗ ಶೀಲಾ ದೀಕ್ಷಿತ್ ಅವರು ಉತ್ತರ ನೀಡಬೇಕಾದ ಸಮಯ ಬಂದಿದೆ. ಸ್ಪಷ್ಟನೆ ನೀಡಿ ಶೀಲಾ ದೀಕ್ಷಿತ್ ಅವರು ತಮ್ಮ ನಿಲುವನ್ನು ತಿಳಿಸಬೇಕಿದೆ ಎಂದು ಹೇಳಿದ್ದಾರೆ.
ಹಗರಣ ಸಂಬಂಧ ನಿನ್ನೆಯಷ್ಟೇ ಭಷ್ಟಾಚಾರ ನಿಗ್ರಹ ದಳ ಶೀಲಾ ದೀಕ್ಷಿತ್ ಅವರಿಗೆ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್'ವೊಂದನ್ನು ಜಾರಿ ಮಾಡಿತ್ತು. ಹಗರಣ ಸಂಬಂಧ ಸತ್ಯಾಂಶಗಳನ್ನು ಬಚ್ಚಿಡುತ್ತಿರುವುದಾಗಿ ಸಂಶಯಗಳು ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಭಾಗಿಯಾಗುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿತ್ತು.
ಪ್ರಸ್ತುತ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಹಗರಣ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಶೀಲಾ ದೀಕ್ಷಿತ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಎಸಿಬಿ ಮುಖ್ಯಸ್ಥೆ ಎಂ.ಕೆ. ಮೀನಾ ಅವರು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


