ಪ್ರಸಿದ್ಧ ಪವಾಡ ಬಯಲು ತಜ್ಞ ಗೌರವ್ ತಿವಾರಿ ಅನುಮಾನಾಸ್ಪದ ಸಾವು
ಭಾರತದ ಪ್ರಸಿದ್ಧ ಪವಾಡ ಬಯಲು ತಜ್ಞ ಗೌರವ್ ತಿವಾರಿ ಅವರ ಮೃತ ದೇಹ ಪತ್ತೆಯಾಗಿದ್ದು ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಉಂಟು ಮಾಡಿದೆ.

ನವದೆಹಲಿ: ಭಾರತದ ಪ್ರಸಿದ್ಧ ಪವಾಡ ಬಯಲು ತಜ್ಞ ಗೌರವ್ ತಿವಾರಿ ಅವರ ಮೃತ ದೇಹ ಪತ್ತೆಯಾಗಿದ್ದು ಸಾವನ್ನಪ್ಪಿರುವುದು ಹಲವು ಅನುಮಾನಗಳನ್ನು ಉಂಟು ಮಾಡಿದೆ.
ಮೂಲತಃ ವಾಣಿಜ್ಯ ಪೈಲಟ್ ಆಗಿದ್ದ ಗೌರವ್ ತಿವಾರಿ, 2009 ರಲ್ಲಿ ಪವಾಡ ಬಯಲು ಮಾಡುವುದಕ್ಕಾಗಿಯೇ ಸಂಘಟನೆಯೊಂದನ್ನು ಪ್ರಾರಂಭಿಸಿ ಇಂಡಿಯನ್ ಪ್ಯಾರಾ ನಾರ್ಮಲ್ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟಿಹಾಕಿದ್ದರು. ಪವಾಡಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಗೌರವ್ ತಿವಾರಿ ಅವರ ಉದ್ದೇಶವಾಗಿತ್ತು.
ತಂದೆ-ತಾಯಿ, ಪತ್ನಿಯೊಂದಿಗೆ ವಾಸವಾಗಿದ್ದ ಗೌರವ್ ತಿವಾರಿ ಅವರಿಗೆ ಆತ್ಮಹಿತ್ಯೆ ಮಾಡಿಕೊಳ್ಳಲು ಯಾವುದೇ ಕಾರಣಗಳು ಇರಲಿಲ್ಲ ಎಂದು ತಿಳಿದುಬಂದಿದ್ದು, ನವದೆಹಲಿಯ ದ್ವಾರಕಾ ಪ್ರದೇಶದಲ್ಲಿರುವ ಫ್ಲ್ಯಾಟ್ ನ ಬಾತ್ ರೂಂನಲ್ಲಿ ಗೌರವ್ ತಿವಾರಿ ಅವರ ಮೃತ ದೇಹ ಪತ್ತೆಯಾಗಿರುವುದರಿಂದ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ 11 ಗಂಟೆ ವೇಳೆ ಬಾತ್ ರೂಮ್ ನಲ್ಲಿ ನೆಲದ ಮೇಲೆ ಬಿದ್ದ ಶಬ್ದ ಕೇಳಿದ ತಿವಾರಿ ಕುಟುಂಬದವರಿಗೆ ಬಾತ್ ರೂಮ್ ನಲ್ಲಿ ಗೌರವ್ ತಿವಾರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರು ಗೌರವ್ ತಿವಾರಿಯನ್ನು ಬದುಕಿಸಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ತಿವಾರಿ ಕುತ್ತಿಗೆ ಸುತ್ತ ಕಪ್ಪು ಗೆರೆ ಕಂಡುಬಂದಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 2016 ರ ಜನವರಿಯಲ್ಲಿ ವಿವಾಹವಾಗಿದ್ದ ಗೌರವ್ ತಿವಾರಿ ತನ್ನನ್ನು ಯಾವುದೋ ಋಣಾತ್ಮಕ ಶಕ್ತಿ ತನ್ನೆಡೆಗೆ ಸೆಳೆಯುತ್ತಿದೆ ಎಂದು ಪತ್ನಿಯೊಂದಿಗೆ ಹೇಳಿದ್ದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


