ದೇಶ

ಸುಮ್ಮನಿರು, ಇಲ್ಲದಿದ್ದರೆ ರೇಪ್ ಮಾಡುತ್ತೇನೆ: ಯುವತಿಗೆ ಕ್ಯಾಬ್ ಚಾಲಕನ ಆವಾಜ್

ಬಾಯಿ ಮುಚ್ಕೊಂಡು ಸುಮ್ಮನಿರು, ಇಲ್ಲದಿದ್ದರೆ ಕಿಡ್ನಾಪ್ ಮಾಡಿ ರೇಪ್ ಮಾಡುತ್ತೇನೆ ಎಂದು ಯುವತಿಯೊಬ್ಬರಿಗೆ ಆಪ್ ಆಧಾರಿತ ಕ್ಯಾಬ್ ನ ಚಾಲಕನೊಬ್ಬ..

ಸುಮ್ಮನಿರು, ಇಲ್ಲದಿದ್ದರೆ ರೇಪ್ ಮಾಡುತ್ತೇನೆ: ಯುವತಿಗೆ ಕ್ಯಾಬ್ ಚಾಲಕನ ಆವಾಜ್
ಸಾಂದರ್ಭಿಕ ಚಿತ್ರ
Published On :
ಕೋಲ್ಕತಾ: ಬಾಯಿ ಮುಚ್ಕೊಂಡು ಸುಮ್ಮನಿರು, ಇಲ್ಲದಿದ್ದರೆ ಕಿಡ್ನಾಪ್ ಮಾಡಿ ರೇಪ್ ಮಾಡುತ್ತೇನೆ ಎಂದು ಯುವತಿಯೊಬ್ಬರಿಗೆ ಆಪ್ ಆಧಾರಿತ ಕ್ಯಾಬ್ ನ ಚಾಲಕನೊಬ್ಬ ಬೆದರಿಕೆ ಹಾಕಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಬಾಯಿ ಮುಚ್ಕೊಂಡು ಸುಮ್ಮನಿರು ಇಲ್ಲದಿದ್ದರೆ ಕಿಡ್ನಾಪ್ ಮಾಡಿ ರೇಪ್ ಮಾಡುತ್ತೇನೆ ಎಂಬ ಉಬರ್ ಕ್ಯಾಬ್ ಚಾಲಕನ ಬೆದರಿಕೆಗೆ ಹೆದರಿದ 27 ವರ್ಷದ ಯುವತಿ ಚಲಿಸುವ ಕಾರಿನಿಂದಲೇ ಜಿಗಿದಿದ್ದಾಳೆ. ಇಷ್ಟಾದರು ಬಿಡದ ಚಾಲಕ ರಿವರ್ಸ್ ಬಂದು ತನ್ನ ಮೇಲೆಯೇ ಕಾರು ಹತ್ತಿಸಲು ಯತ್ನಿಸಿರುವುದಾಗಿ ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಕೋಲ್ಕತಾ ಪೊಲೀಸರು ಆರೋಪಿ ಸಂತು ಪುರಾಣಿಕ್ ಎಂಬಾತನನ್ನು ಬಂಧಿಸಿದ್ದು, ಆರೋಪಿಯ ವಿರುದ್ಧ ಮಹಿಳೆಗೆ ಕಿರುಕುಳ ನೀಡಿದ ಮತ್ತು ಅಪರಾಧಕ್ಕೆ ಯತ್ನಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಸಾಲ್ಟ್ ಲೇಕ್ ನಿವಾಸಿಯಾಗಿರುವ ಮಹಿಳೆ ಕಳೆದ ಸೋಮವಾರ ರಾತ್ರಿ ಗಂಟೆಯ ಸುಮಾರಿಗೆ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಅರಣ್ಯ ಭವನದ ಬಳಿ ಬಂದಾಗ ಚಾಲಕ ಅನಗತ್ಯವಾಗಿ ವೇಗವಾಗಿ ಎಡಭಾಗಕ್ಕೆ ಚಲಾಯಿಸಿದ್ದ. ಮುಂದೆ ಬಿಜನ್ ಭವನದ ಬಳಿಯೂ ಹೀಗೆ ಮಾಡಿದಾಗ ಮಹಿಳೆ ಪ್ರತಿಭಟಿಸಿದ್ದಾರೆ. ಆದರೆ ಹೀಗೆ ಹೋಗುವುದರಿಂದ ಬೇಗ ತಲುಪಬಹುದು ಎಂದು ಸಮಜಾಹಿಸಿ ನೀಡಿದ್ದಾನೆ. ಆದರೆ ಆತಂಕಗೊಂಡ ಮಹಿಳೆ ಕೂಡಲೇ ಗಾಡಿ ನಿಲ್ಲಿಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಚಾಲಕ ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ ಅಪಹರಣ ಮಾಡಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಮಹಿಳೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.