ನಮಾಮಿ ಗಂಗೆ ಶುದ್ದೀಕರಣ ಯೋಜನೆಗೆ ಇಂದು ಚಾಲನೆ
ಸುಮಾರು 2ಸಾವಿರ ಕೋಟಿ ರೂ ವೆಚ್ಚದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನವಾಮಿ ಗಂಗೆ ಯೋಜನೆಗೆ ಇಂದು ಚಾಲನೆ ...

ನವದೆಹಲಿ: ಸುಮಾರು 2ಸಾವಿರ ಕೋಟಿ ರೂ ವೆಚ್ಚದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನವಾಮಿ ಗಂಗೆ ಯೋಜನೆಗೆ ಇಂದು ಚಾಲನೆ ಸಿಗಲಿದೆ. ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ 300 ಯೋಜನೆಗಳು ‘ನಮಾಮಿ ಗಂಗೆ’ಯಲ್ಲಿ ಸೇರಿವೆ.
ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು ಆರಂಭಿಸಲಾಗುತ್ತದೆ.
ಗಂಗಾ ನದಿ ತಟದ 104 ಸ್ಥಳಗಳಲ್ಲಿ ಏಕಕಾಲಕ್ಕೆ ಯೋಜನೆ ಆರಂಭವಾಗಲಿದೆ. ಈ ಆಂದೋಲನಕ್ಕೆ 5 ವರ್ಷಗಳ ಅವಧಿಗೆ 20 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿರಿಸಿದೆ. 2019ರೊಳಗೆ ಗಂಗೆಯನ್ನು ವಿಶ್ವದ ಟಾಪ್-10 ಸ್ವಚ್ಛ ನದಿ ಎಂದು ಘೋಷಿಸುವ ಇರಾದೆ ಮೋದಿ ಸರ್ಕಾರದ್ದು.
ಇದೇ ಮೊದಲ ಬಾರಿ ಇಷ್ಟೊಂದು ಸಂಪೂರ್ಣ ಪ್ರಮಾಣದಲ್ಲಿ ನದಿಯೊಂದನ್ನು ಶುದ್ಧೀಕರಿಸಲಾಗುತ್ತಿದೆ. ಅಕ್ಟೋಬರ್ 2016ರ ವೇಳೆಗೆ ಮೊದಲ ಹಂತ ಮುಗಿಯಲಿದೆ. 2ನೇ ಹಂತದ ಶುದ್ಧೀಕರಣಕ್ಕೆ 2 ವರ್ಷ ಹಿಡಿಯಲಿದೆ'.
ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗು ವುದು. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉನ್ನತ ತಂತ್ರಜ್ಞಾನ ಬಳಸಿ ಶುದ್ಧೀಕರಣ ನಡೆಸಲಾಗುವುದು ಎಂದು ಸಚಿವ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ, ಉಮಾಭಾರತಿ, ನರೇಂದ್ರ ತೋಮರ್, ಮಹೇಶ್ ಶರ್ಮಾ ಹಾಗೂ ನೂತನವಾಗಿ ನೇಮಕವಾಗಿರುವ ರಾಜ್ಯ ಜಲ ಸಂಪನ್ಮೂಲ ಸಚಿವ ವಿಜಯ್ ಗೋಯೆಲ್ ಹರಿದ್ವಾರದಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


