ಮೋದಿ ವಿಷಯದಲ್ಲಿ ಜಗಳ: ಮದುವೆ ಮುರಿದುಕೊಂಡ ಜೋಡಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ಉಂಟಾದ ಜಗಳದಿಂದ ಜೋಡಿಗಳಿಬ್ಬರು ತಮ್ಮ ಮದುವೆ ಮುರಿದುಕೊಂಡ...

Published On :
ಕಾನ್ಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ಉಂಟಾದ ಜಗಳದಿಂದ ಜೋಡಿಗಳಿಬ್ಬರು ತಮ್ಮ ಮದುವೆ ಮುರಿದುಕೊಂಡ ಘಟನೆ ಮಹಾರಾಷ್ಟ್ರದ ಕಾನ್ಪುರದಲ್ಲಿ ನಡೆದಿದೆ.
ವರ ಸ್ವಂತ ಉದ್ಯಮಿ. ವಧು ಸರ್ಕಾರಿ ನೌಕರಿಯಲ್ಲಿದ್ದಾಳೆ. ಮದುವೆ ಸಮಾರಂಭದ ಖರ್ಚುವೆಚ್ಚಗಳನ್ನು ಹಂಚಿಕೊಳ್ಳಲು ಹುಡುಗ-ಹುಡುಗಿ ನಿರ್ಧರಿಸಿದ್ದರು. ಅದರಂತೆ ದೇವಸ್ಥಾನವೊಂದರಲ್ಲಿ ಭೇಟಿಯಾಗಿ ಪರಸ್ಪರ ಚರ್ಚಿಸಿ ಯಾರು ಎಷ್ಟು ಖರ್ಚು ಮಾಡುವುದು, ಹೇಗೆ ಎಂದು ಅಂತಿಮಗೊಳಿಸಲು ತೀರ್ಮಾನಿಸಿದರು.
ಅದರಂತೆ ದೇವಸ್ಥಾನಕ್ಕೆ ಹೋದರು. ಆರಂಭದಲ್ಲಿ ಇಬ್ಬರ ನಡುವೆ ಸಂಭಾಷಣೆ, ಮಾತುಕತೆ ಸಹಜವಾಗಿ ಸಾಗುತ್ತಿತ್ತು. ಯಾವಾಗ ದೇಶದ ಆರ್ಥಿಕ ಕುಸಿತ ವಿಷಯ ಬಂತೋ ಆಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿ ಅದು ತಾರಕಕ್ಕೆ ಹೋಯಿತು.
ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕಾರಣ ಎಂದು ಯುವತಿ ಹೇಳಿದಳು. ಅದು ಯುವಕನಿಗೆ ಸಿಟ್ಟು ತರಿಸಿತು.ಆತ ಮೋದಿಯ ಕಟ್ಟಾ ಅಭಿಮಾನಿ. ಹೀಗಾಗಿ ಇಬ್ಬರ ಮಧ್ಯೆ ಚರ್ಚೆ, ವಾಗ್ವಾದ ನಡೆಯಿತು. ಕೊನೆಗೆ ಇಬ್ಬರೂ ದೂರವಾಗಲು ನಿರ್ಧರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


