ದೇಶ

ಪ್ರಧಾನಿ ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರು ಅನುಪ್ರಿಯ ಪಟೇಲ್

ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆಯಾಗಿದ್ದು ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ 19 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದ...

ಪ್ರಧಾನಿ ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರು ಅನುಪ್ರಿಯ ಪಟೇಲ್
ಅನುಪ್ರಿಯಾ ಸಿಂಗ್ ಪಟೇಲ್
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆಯಾಗಿದ್ದು ಕರ್ನಾಟಕದ ರಮೇಶ್ ಜಿಗಜಣಿಗೆ ಸೇರಿದಂತೆ 19 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಆ ಪೈಕಿ ಅನುಪ್ರಿಯ ಪಟೇಲ್ ಕಿರಿಯ ಸಚಿವೆಯಾಗಿದ್ದಾರೆ.

ಮೋದಿ ಸಂಪುಟ ಸೇರಿರುವವರ ಪೈಕಿ 36 ವರ್ಷದ ಮಿರ್ಜಾಪುರದ ಸಂಸದೆ ಅನುಪ್ರಿಯ ಪಟೇಲ್ ಮೋದಿ ಸಂಪುಟದ ಕಿರಿಯ ಸಚಿವರಲ್ಲೊಬ್ಬರಾಗಿದ್ದು, ಎಂಬಿಎ ಡಿಗ್ರಿ ಮುಗಿಸಿರುವ ಅವರು ಮನಃಶಾಸ್ತ್ರ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆ ಅನುಪ್ರಿಯ ಪಟೇಲ್ ಅವರನ್ನು ಅವರ ತಾಯಿ, ಅಪ್ನಾ ದಳ ಪಕ್ಷದ ಅಧ್ಯಕ್ಷೆ ಕೃಷ್ಣ ಸಿಂಗ್ ಪಟೇಲ್ 2015ರಲ್ಲಿ ಪಕ್ಷದಿಂದ ಉಚ್ಛಾಟಿಸಿದ್ದರು.

ತಂದೆ ಸೋನೆಲಾಲ್ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ ಅನುಪ್ರಿಯ ಪಟೇಲ್ ಅಪ್ನಾದಳದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 2012ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ರೋಹನಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಳಿಕ 2014ರ ಲೋಕಸಭೆ ಚುನಾವಣೆಯಲ್ಲಿ ಅಪ್ನಾದಳ ಬಿಜೆಪಿ ಮೈತ್ರಿಯೊಂದಿಗೆ ಮಿರ್ಜಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.