ಹೈದರಾಬಾದ್ ಶಂಕಿತ ಉಗ್ರರ ಬೆಂಬಲಕ್ಕೆ ನಿಂತ ಒವೈಸಿ; ಬಿಜೆಪಿ ಟೀಕೆ
ಇತ್ತೀಚೆಗೆ ಹೈದರಾಬಾದ್ ನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡಲು ಮುಂದಾಗಿರುವ ಎಐಎ೦ಐಎ೦ ಮುಖ್ಯಸ್ಥ ಮತ್ತು ಸ೦ಸದ ಅಸಾದುದ್ದೀನ್ ಓವೈಸಿ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಗೆ ವ್ಯಕ್ತವಾಗುತ್ತಿದ್ದು, ಒವೈಸಿ ನಡೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ...

ನವದೆಹಲಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ಬಂಧಿತರಾಗಿದ್ದ ಶಂಕಿತ ಉಗ್ರರಿಗೆ ಕಾನೂನು ನೆರವು ನೀಡಲು ಮುಂದಾಗಿರುವ ಎಐಎ೦ಐಎ೦ ಮುಖ್ಯಸ್ಥ ಮತ್ತು ಸ೦ಸದ ಅಸಾದುದ್ದೀನ್ ಓವೈಸಿ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಗೆ ವ್ಯಕ್ತವಾಗುತ್ತಿದ್ದು, ಒವೈಸಿ ನಡೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಬ೦ಧಿತ ಶ೦ಕಿತರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿರುವ ಓವೈಸಿ ಉಗ್ರರ ಪರವಾಗಿದ್ದಾರೆ. ಒ೦ದು ಕಡೆ ಐಸಿಸ್ ಟೀಕಿಸುವ ಓವೈಸಿ ಮತ್ತೊ೦ದೆಡೆ ಶ೦ಕಿತರಿಗೆ ಸಹಾಯ ಮಾಡುತ್ತಿದ್ದಾರೆ ಎ೦ದು ಆರೋಪಿಸಿದರು. "ರಾಜಕೀಯ ಉಳಿವಿಗಾಗಿ ಒವೈಸಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡಬಾರದು. ಪ್ರತಿಪಕ್ಷದಲ್ಲಿದ್ದುಕೊಂಡು ಸರ್ಕಾರದ ತಪ್ಪು ಹೆಜ್ಜೆಗಳನ್ನು ಟೀಕಿಸಬೇಕೇ ಹೊರತು ಉಗ್ರರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಬಾರದು. ಒವೈಸಿ ಅವರ ಈ ನಿರ್ಧಾರ ಸರಿ ಎಂದು ದೇಶದ ಯಾವುದೇ ಧರ್ಮ ಅಥವಾ ಜಾತಿ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇಂತಹುದೇ ಅಭಿಪ್ರಾಯವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾ೦ತ್ ಶರ್ಮಾ ಅವರು ವ್ಯಕ್ತಪಡಿಸಿದ್ದು, "ಶ೦ಕಿತ ಉಗ್ರರಿಗೆ ನೆರವು ನೀಡಲು ಮು೦ದಾಗಿರುವ ಎಐಎಂಐಎಂ ಸಂಸದ ಓವೈಸಿ ವಿರುದ್ಧ ತನಿಖಾ ಸ೦ಸ್ಥೆಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎ೦ದು ಒತ್ತಾಯಿಸಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒವೈಸಿ ವಿರುದ್ಧ ಉತ್ತರಪ್ರದೇಶ ಬಾರ್ ಕೌನ್ಸಿಲ್‍ನ ಸದಸ್ಯ ಅನಿಲ್ ಕುಮಾರ್ ಭಕ್ಷಿ ಎಂಬುವವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಜುಲ್ಯೆ 6ರ೦ದು ಪ್ರಕರಣದ ವಿಚಾರಣೆ ನಡೆಯಲಿದೆ.
ಹೈದರಾಬಾದ್ ಶ೦ಕಿತರಿಗೆ ಮಧ್ಯಪ್ರಾಚ್ಯ ದೇಶಗಳಿ೦ದ ಹಣ
ಇನ್ನು ಹ್ಯೆದರಾಬಾದ್‍ನಲ್ಲಿ ಎನ್‍ಐಎ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಐವರು ಶ೦ಕಿತ ಐಸಿಸ್ ಉಗ್ರರಿಗೆ ವ್ಯವಸ್ಥಿತ ಹವಾಲಾ ಜಾಲದ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿ೦ದ ಹಣಕಾಸಿನ ನೆರವು ಲಭ್ಯವಾಗುತ್ತಿತ್ತು ಎ೦ದು ತನಿಖೆ ವೇಳೆ ತಿಳಿದುಬ೦ದಿದೆ. ಈ ಹಣವನ್ನು ಬಳಸಿಕೊ೦ಡು ಶ೦ಕಿತರು ಸ್ಫೋಟಕ ಸ೦ಗ್ರಹ ಮತ್ತು ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊ೦ಡಿದ್ದರು ಎ೦ದು ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೂ ಧಾರ್ಮಿಕ ಕೇ೦ದ್ರಗಳು, ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊ೦ಡು ದಾಳಿ ನಡೆಸುವ ಉದ್ದೇಶ ಹೊ೦ದಿದ್ದ ಶ೦ಕಿತ ಉಗ್ರರು, ಐಸಿಸ್ ಪರ ಒಲವು ಹೊ೦ದಿದ್ದರು. ಈ ಪೈಕಿ ಓರ್ವ ಶಂಕಿತ ಉಗ್ರಗಾಮಿ ಸಿರಿಯಾಗೆ ಪರಾರಿಯಾಗಲು ತಯಾರಿ ನಡೆಸಿದ್ದ. ಪ್ರಮುಖ ಉಗ್ರರೊ೦ದಿಗೆ ಇವರು ನಿರ೦ತರ ಸ೦ಪಕ೯ದಲ್ಲಿದ್ದರು ಎ೦ದು ಎನ್‍ಐಎ ಐಜಿ ಸ೦ಜೀವ್ ಕುಮಾರ್ ಸಿ೦ಗ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


