ದೇಶ

ಆಯೋಗಕ್ಕೆ ಸಿಡಿ-ದಾಖಲೆಗಳನ್ನು ಸಲ್ಲಿಸಿದ ಸೋಲಾರ್ ಹಗರಣ ಆರೋಪಿ ಸರಿತ

ಸೋಲಾರ್ ಹಗರಣದ ಎರಡನೇ ಪ್ರಮುಖ ಆರೋಪಿ ಸರಿತ ಎಸ್ ನಾಯರ್ ಅವರು ಹಗರಣಕ್ಕೆ ಸಂಬಂಧಪಟ್ಟ ಸಿಡಿ ಮತ್ತು ಅಗತ್ಯ ದಾಖಲೆಗಳನ್ನು ಆಯೋಗಕ್ಕೆ ನೀಡಿದ್ದಾರೆ....

ಆಯೋಗಕ್ಕೆ ಸಿಡಿ-ದಾಖಲೆಗಳನ್ನು ಸಲ್ಲಿಸಿದ ಸೋಲಾರ್ ಹಗರಣ ಆರೋಪಿ ಸರಿತ
ಸರಿತ ಎಸ್ ನಾಯರ್
Published On :

ಕೊಚ್ಚಿ: ಸೋಲಾರ್ ಹಗರಣದ ಎರಡನೇ ಪ್ರಮುಖ ಆರೋಪಿ ಸರಿತ ಎಸ್ ನಾಯರ್ ಅವರು ಹಗರಣಕ್ಕೆ ಸಂಬಂಧಪಟ್ಟ ಸಿಡಿ ಮತ್ತು ಅಗತ್ಯ ದಾಖಲೆಗಳನ್ನು ಆಯೋಗಕ್ಕೆ ನೀಡಿದ್ದಾರೆ.

ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ, ಮಾಜಿ ಗನ್ ಮ್ಯಾನ್ ಸಲೀಂ ರಾಜ್, ಶಾಸಕ ಬೆನ್ನಿ ಬೆಹನಾನ್ ಮತ್ತು ಕಾಂಗ್ರೆಸ್ ಮುಖಂಡ ತಂಪನೂರ್ ರವಿ ಅವರೊಂದಿಗೆ ನಡೆಸಿದ ಸಂಭಾಷಣೆ ಕುರಿತಾದ ದಾಖಲೆಗಳನ್ನು ಸೋಲಾರ್ ಹಗರಣದ ತನಿಖಾ ಸಮಿತಿಯ ನ್ಯಾಯಮೂರ್ತಿ ಜಿ ಶಿವರಾಜನ್ ಅವರಿಗೆ ನೀಡಿದ್ದಾರೆ.

ಸಲೀಂ ರಾಜ್ ನೊಂದಿಗಿನ ಮೊಬೈಲ್ ಸಂಭಾಷಣೆಯ ಒಂದು ಸಿಡಿ. ಬೆನ್ನಿ ಬೆಹನಾನ್ ಮತ್ತು ತಂಪನೂರ್ ರವಿ ಜತೆಗಿನ ಸಂಭಾಷಣೆಯ ದಾಖಲೆ ಹಾಗೂ ಮೊಬೈಲ್ ನಲ್ಲಿ ಉದ್ಯಮಿಯೊಂದಿಗೆ ಚಾಟ್ ಮಾಡಿದ ದಾಖಲೆಗಳ ಮೂರು ಸಿಡಿಗಳು ಆಯೋಗಕ್ಕೆ ಸಲ್ಲಿಸಿದ್ದು. ಇವುಗಳನ್ನು ಸಾಕ್ಷ್ಯಾಧಾರಗಳಾಗಿ ಆಯೋಗ ಸ್ವೀಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.