ಆಟೋ ಚಾಲಕನ ಪರವಾನಗಿ ಪಡೆಯಲು 8ನೇ ತರಗತಿ ಕಡ್ಡಾಯ: ಕೇಂದ್ರದ ಕ್ರಮಕ್ಕೆ ಕೇಜ್ರಿವಾಲ್ ಕಿಡಿ
ಕೌಶಲ್ಯ ತರಬೇತಿ ನೀಡುವ ನೆಪದಲ್ಲಿ ಕೇಂದ್ರ ಸರ್ಕಾರ ಕೌಶಲ್ಯವುಳ್ಳ ಆಟೋರಿಕ್ಷಾ ಚಾಲಕರನ್ನು ನಿರುದ್ಯೋಗಿಗಳನ್ನಾಗಿ...

ಬೆಂಗಳೂರು: ಕೌಶಲ್ಯ ತರಬೇತಿ ನೀಡುವ ನೆಪದಲ್ಲಿ ಕೇಂದ್ರ ಸರ್ಕಾರ ಕೌಶಲ್ಯವುಳ್ಳ ಆಟೋರಿಕ್ಷಾ ಚಾಲಕರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದಕ್ಕೆ ಮುಂದಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷ ವತಿಯಿಂದ ನಗರದ ಸೇಂಟ್ ಜೋಸೆಫ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿನ ಬಹುತೇಕ ಆಟೋರಿಕ್ಷಾ ಚಾಲಕರಲ್ಲಿ ಬಹುತೇಕರು ಅಸಾಕ್ಷರರಾಗಿದ್ದಾರೆ. ಇತಂಹ ಸಂದರ್ಭದಲ್ಲಿ ಆಟೋ ಚಾಲಕನ ಪರವಾನಗಿ ಪಡೆಯುವುದಕ್ಕೆ 8ನೇ ತರಗತಿ ಪ್ರಮಾಣ ಪತ್ರ ಕಡ್ಡಾಯ ಎಂದು ಆದೇಶಿಸುವುದಕ್ಕೆ ಮುಂದಾಗಿದೆ. ಆ ಮೂಲಕ ಆಟೋ ಪರವಾನಗಿಗಾಗಿ ನಕಲಿ ಪ್ರಮಾಣ ಪತ್ರ ಪಡೆಯಲು ಪ್ರಚೋದನೆ ನೀಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಆಪಾದಿಸಿದರು.
ಆಟೋ ಪರವಾನಗಿ ಪಡೆಯಲು 8ನೇ ತರಗತಿ ಕಡ್ಡಾಯ ಮಾಡುವವ ಮೂಲಕ ಅರಲ್ಲಿನ ಕೌಶಲ್ಯವನ್ನು ಕಿತ್ತುಕೊಂಡು ನಿರುದ್ಯೋಗಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿದ್ಯಾಭ್ಯಾಸ ಕಡ್ಡಾಯ ನಿಯಮ ಹಿಂತೆಗುಯವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ದೆಹಲಿಗೆ ಹಿಂದಿರುಗಿದ ಬಳಿಕ ಆಟೋ ಚಾಲಕರಿಗೆ ಮಾಡಿರುವ ಕಡ್ಡಾಯ ನಿಯಮವನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜತೆ ಮಾತುಕತೆ ನಡೆಸಿ ನಿಯಮವನ್ನು ಹಿಂಪಡೆಯಲು ಒತ್ತಾಯ ಮಾಡುವುದಾಗಿ ಭರವಸೆ ನೀಡಿದರು.
ದೆಹಲಿಯಲ್ಲಿ ಸಾಮಾನ್ಯ ನಾಗರಿಕನ ಬಳಿ ಮುಖ್ಯಮಂತ್ರಿಯ ಮೊಬೈಲ್ ನಂಬರ್ ಇದೆ. ಆದರೆ, ರಾಜ್ಯದಲ್ಲಿ ಎಷ್ಟು ಮಂದಿ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊಬೈಲ್ ನಂಬರ್ ಇದೆ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


