ಪ್ರಧಾನಿಯಿಂದ ಲೋಕಾರ್ಪಣೆಗೊಳ್ಳುವ ವಾರ ಮೊದಲೇ ಒಡಿಸ್ಸಾದ ಐಒಸಿಎಲ್ ನಲ್ಲಿ ಬೆಂಕಿ
ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಳ್ಳುವ ಮೊದಲೇ ಒಡಿಸಾದ ಪರಾದೀಪ್ ನ ಐಒಸಿಎಲ್ ಘಟಕದಲ್ಲಿ ಬೆಂಕಿ ..

ಪರದೀಪ್: ಇನ್ನೊಂದು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಗೊಳ್ಳುವ ಮೊದಲೇ ಒಡಿಸಾದ ಪರಾದೀಪ್ ನ ಐಒಸಿಎಲ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಸ್ಥಳಕ್ಕೆ ಆರು ಅಗ್ನಿ ಶಾಮಕ ದಳಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಬೆಂಕಿಯನ್ನು ಶಮನಗೊಳಿಸಲಾಗುತ್ತಿದೆ. ಇನ್ನೂ ಬೆಂಕಿ ಅವಘಡದಿಂದ ಯಾವುದೇ ಅವಘಡ ಅಥವಾ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಜಗಜೀತ್‌ಸಿಂಗ್‌ನಗರ ಎಎಸ್‌ಪಿ ಮದಬನಂದ ಸಾಹು ಹೇಳಿದ್ದಾರೆ.
ಘಟಕದ ಗೇಟ್ ನಂ.1ರ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ. ಸುಮಾರು 35 ಸಾವಿರ ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ಈ ಯೋಜನೆಯನ್ನು ಫೆ.7ರಂದು ಪ್ರಧಾನಿ ದೇಶಕ್ಕೆ ಸಮರ್ಪಿಸಬೇಕಿತ್ತು. ಈ ಅವಘಡ ಸಂಭವಿಸಿರುವುದು ಆತಂಕ ಸೃಷ್ಟಿಸಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


