ದೇಶ

ಕಲೆಕ್ಟರ್ ಬಳಿ ದೂರು ನೀಡಲು ರಾತ್ರಿ ವೇಳೆ 30ಕಿಮೀ ನಡೆದ 73 ವಿದ್ಯಾರ್ಥಿನಿಯರು

ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡುವುದಕ್ಕಾಗಿ ಪಕಟಿಯಾ ಸರ್ಕಾರಿ ಪ್ರೌಢಶಾಲೆಯ 73 ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸುಮಾರು...

ಕಲೆಕ್ಟರ್ ಬಳಿ ದೂರು ನೀಡಲು ರಾತ್ರಿ ವೇಳೆ 30ಕಿಮೀ ನಡೆದ 73 ವಿದ್ಯಾರ್ಥಿನಿಯರು
ಸಾಂದರ್ಭಿಕ ಚಿತ್ರ
Published On :
ಬರಿಪದ: ಜಿಲ್ಲಾ ಕಲೆಕ್ಟರ್ ಅವರನ್ನು ಭೇಟಿ ಮಾಡುವುದಕ್ಕಾಗಿ ಪಕಟಿಯಾ ಸರ್ಕಾರಿ ಪ್ರೌಢಶಾಲೆಯ 73 ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಸುಮಾರು 30 ಕಿ.ಮೀ ನಡೆದುಕೊಂಡು ಹೋಗಿರುವ ಘಟನೆ ಒಡಿಶಾದ ಮಯುರ್ ಬಾಂಜ್ ಜಿಲ್ಲೆಯ ಬರಿಪದ ಎಂಬಲ್ಲಿ ನಡೆದಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಳ್ಳಲು ರಾತ್ರಿಯ ವೇಳೆ ಸುಮಾರು 30 ಕಿಲೋ ಮೀಟರ್ ನಡೆದ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರು ಕಲೆಕ್ಟರ್ ರಾಜೇಶ್ ಪ್ರವಾಕರ್ ಪಾಟಿಲ್ ಅವರನ್ನು ಭೇಟಿ ಮಾಡಿದ್ದಾರೆ.
ನಿನ್ನೆ ಸಂಜೆ ಹಾಸ್ಟೆಲ್ ನಿಂದ ನಡೆದು ಹೋದ ವಿದ್ಯಾರ್ಥಿನಿಯರು ಮಧ್ಯರಾತ್ರಿಯ ವೇಳೆಗೆ ಕಲೆಕ್ಟರ್ ಅವರ ಮನೆ ತಲುಪಿದ್ದಾರೆ. ಹಾಸ್ಟೆಲ್ ನಲ್ಲಿ ತಮಗೆ ಕಿರುಕುಳ ನೀಡಲಾಗುತ್ತಿದೆ. ಹಾಸ್ಟೆಲ್ ನ ಕೆಲ ಸಿಬ್ಬಂದಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ.  ಅಷ್ಟೇ ಅಲ್ಲದೇ, ಆಡಳಿತ ಮಂಡಳಿ ಅಲಕ್ಷ್ಯತೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ತಮ್ಮ ನೋವುಗಳನ್ನು ಕಲೆಕ್ಟರ್ ಬಳಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.