ದೇಶ

ಕೆಲ ಹಿಂದೂ ಗುಂಪುಗಳು ಮುಸ್ಲಿಂ ಮೂಲವಾದಿಗಳಂತೆ ವರ್ತಿಸುತ್ತಿವೆ: ಜಾವೇದ್ ಅಖ್ತರ್

ಅಸಹಿಷ್ಣುತೆ ಕುರಿತಂತೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಖ್ಯಾತ ಸಾಹಿತಿ, ಬಾಲಿವುಡ್‌ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಕೆಲವು ಹಿಂದೂ...

ಕೆಲ ಹಿಂದೂ ಗುಂಪುಗಳು ಮುಸ್ಲಿಂ ಮೂಲವಾದಿಗಳಂತೆ ವರ್ತಿಸುತ್ತಿವೆ: ಜಾವೇದ್ ಅಖ್ತರ್
ಜಾವೇದ್ ಅಖ್ತರ್
Published On :
ಕೋಲ್ಕತಾ: ಅಸಹಿಷ್ಣುತೆ ಕುರಿತಂತೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಖ್ಯಾತ ಸಾಹಿತಿ, ಬಾಲಿವುಡ್‌ನ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು, ಕೆಲವು ಹಿಂದೂ ಸಂಘಟನೆಗಳು ಮುಸ್ಲಿಂ ಮೂಲಭೂತವಾದಿಗಳಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 
1975ರಲ್ಲಿ ನಾನು ಒಂದು ಹಾಸ್ಯ ದೃಶ್ಯವನ್ನು ದೇವಸ್ಥಾನದಲ್ಲಿ ತೋರಿಸಿದ್ದೆ. ಅದು ಈಗ ತೋರಿಸಲು ಸಾಧ್ಯವಿಲ್ಲ. ಆದರೆ, 1975ರಲ್ಲೂ ನನಗೆ ಮಸೀದಿಯಲ್ಲಿ ಅಂತಹ ದೃಶ್ಯ ತೋರಿಸುವುದಕ್ಕೆ ಸಾಧ್ಯವಿರಲಿಲ್ಲ ಅಷ್ಟು ಪ್ರಮಾಣದ ಅಸಹಿಷ್ಣುತೆ ಅಲ್ಲಿದೆ. ಈಗ ಅದಕ್ಕೆ ಮತ್ತೊಂದು ಹೋಲಿಕೆಯಾಗುತ್ತಿದೆ ಎಂದು ಅಖ್ತರ್ ತಿಳಿಸಿದ್ದಾರೆ. 
ಪ್ರಸ್ತುತ ದಿನಗಳಲ್ಲಿ ಎಲ್ಲವನ್ನೂ ಒಂದೇ ಅರ್ಥದಲ್ಲಿ ನೋಡುತ್ತಾರೆ. ಹಾಗಾಗಿ, ಹಿಂದೂ ಅಂತ ಹೇಳಬೇಡಿ. ಅದು ತಪ್ಪಾಗುತ್ತದೆ. ಕೆಲವು ಹಿಂದೂ ಗುಂಪುಗಳು ಎಂದು ಹೇಳಿ ಎಂದು ಚರ್ಚೆ ವೇಳೆ ಹೇಳಿದ್ದಾರೆ.
ಅಸಹಿಷ್ಣುತೆ ಅಪಾಯ ಮಟ್ಟಕ್ಕೆ ಬಂದು ನಿಂತಿದೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ದೇಶದಲ್ಲಿ ಅಸಹಿಷ್ಣುತೆ ಇಲ್ಲವೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ, ನಾನು ಇವರೆಡೂ ಹೇಳಿಕೆಗಳನ್ನು ನಂಬುವುದಿಲ್ಲ. ಸತ್ಯವೆಂಬದು ಈ ಎರಡು ಹೇಳಿಕೆಗಳ ನಡುವೆಯೇ ಇದೆ. ಭಾರತೀಯ ಸಮಾಜ ಯಾವಾಗಲೂ ಸಹಿಷ್ಣುತೆಯಿಂದ ಕೂಡಿದೆ. ಕೆಲವು ಗುಂಪುಗಳು ಮಾತ್ರ ಯಾವಾಗಲೂ ಯುದ್ಧ ಬಯಸುತ್ತಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.