ಜೆಟ್ ಏರ್ ವೇಸ್ ವಿಮಾನಕ್ಕೆ ಬೆದರಿಕೆ ಕರೆ: ಅನಮಾನಾಸ್ಪದ ಗಿಫ್ಟ್ ಬಾಕ್ಸ್ ಸೃಷ್ಟಿಸಿದ ಆತಂಕ
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಠ್ಮಂಡುವಿಗೆ ತೆರಳಬೇಕಾಗಿದ್ದ ಜೆಟ್ ಏರ್ ವೇಸ್ ವಿಮಾನಯಾನವನ್ನು ಸೋಮವಾರ ಇಲ್ಲಿ ಸ್ಥಗಿತಗೊಳಿಸಿ, ಅದರೊಳಗಿದ್ದ...

ನವದೆಹಲಿ: ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಠ್ಮಂಡುವಿಗೆ ತೆರಳಬೇಕಾಗಿದ್ದ ಜೆಟ್ ಏರ್ ವೇಸ್ ವಿಮಾನಯಾನವನ್ನು ಸೋಮವಾರ ಇಲ್ಲಿ ಸ್ಥಗಿತಗೊಳಿಸಿ, ಅದರೊಳಗಿದ್ದ ಪ್ರಯಾಣಿಕರನ್ನು ವಿಮಾನದಿಂದ ತೆರವುಗೊಳಿಸಿ ಪರಿಶೀಲನೆ ನಡೆಸಲಾಯಿತು.
ಜೆಟ್ ಏರ್ ವೇಸ್ ವಿಮಾನವು ಮಧ್ಯಾಹ್ನ 1.25ಕ್ಕೆ ನವದೆಹಲಿಯಿಂದ ಕಠ್ಮಂಡುವಿಗೆ ಹೊರಡಬೇಕಾಗಿತ್ತು. ಅಷ್ಟರಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅಪರಿಚಿತ ದೂರವಾಣಿ ಕರೆಯೊಂದು ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ತಿಳಿಸಿತು. ತತ್ ಕ್ಷಣವೇ ಎಲ್ಲಾ ಪ್ರಯಾಣಿಕರನ್ನೂ ತೆರವುಗೊಳಿಸಿ ಪರಿಶೀಲನೆ ನಡೆಸಲಾಯ್ತು.
ಸೀಟ್ ನಂಬರ್ 18ರಲ್ಲಿ ಕಂಡು ಬಂದಿದ್ದ ಶಂಕಾಸ್ಪದ ಗಿಫ್ಟ್ ಬಾಕ್ಸ್ ಪ್ರಯಾಣಿಕರಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಅದನ್ನು ತೆರೆದಾಗ ಅದರಲ್ಲಿ ಹ್ಯಾಪಿ ರಿಪಬ್ಲಿಕ್ ಡೇ ಎಂದು ಬರೆಯಲಾಗಿತ್ತು. ಇದೊಂದು ಹುಸಿ ಬಾಂಬ್ ಕರೆ ಎಂದು ಪರಿಗಣಿಸಿ ವಿಮಾನ ಯಾನ ಆರಂಭಿಸಲಾಯ್ತು.
ಎರಡು ದಿನಗಳ ಹಿಂದಷ್ಟೇ 150 ಪ್ರಯಾಣಿಕರನ್ನು ಹೊತ್ತುಕೊಂಡು ಭುವನೇಶ್ವರದಿಂದ ಮುಂಬಯಿಗೆ ಹೋಗುತ್ತಿದ್ದ ಗೋ ಏರ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಸುಳಿವು ದೊರಕಿತ್ತು. ಆಗಲೇ ವಿಮಾನ ಒಂದು ಗಂಟೆಯ ಯಾನವನ್ನು ಮುಗಿಸಿತ್ತು. ಹಾಗಿದ್ದರೂ ವಿಮಾನವನ್ನು ತುರ್ತಾಗಿ ಮರಳಿ ತಂದು ಇಳಿಸಲಾಗಿತ್ತು. ಆದರೆ ಕೂಲಂಕುಷ ಶೋಧದ ಬಳಿಕ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


