ಮೋದಿ ಧಿಕ್ಕರಿಸಿದವರು ಹಾಸ್ಟೆಲ್ ನಿಂದ ಹೊರಕ್ಕೆ
ಹೈದ್ರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವರು ಹಾಗೂ ವಿವಿಯ...

ಹೈದ್ರಾಬಾದ್: ಹೈದ್ರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವರು ಹಾಗೂ ವಿವಿಯ ಆಡಳಿತದ ಪಾತ್ರವನ್ನು ಖಂಡಿಸಿ ಶುಕ್ರವಾರ ಇಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿಗಳಿಬ್ಬರು ಇದೀಗ ಆಡಳಿತ ವ್ಯವಸ್ಥೆಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅಂಬೇಡ್ಕರ್ ವಿವಿಯ ಘಟಿಕೋತ್ಸವದಲ್ಲಿ ಪ್ರಧಾನಿ ಭಾಷಣ ಆರಂಭಿಸುತ್ತಲೇ ವೆಮುಲ ಪ್ರಕರಣದ ಬಗ್ಗೆ ವಾರ ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ ಧೋರಣೆ ಖಂಡಿಸಿ ಅವರ ವಿರುದ್ಧ ರಾಮ್ ಕರಣ್ ನಿರ್ಮಲ್ ಹಾಗೂ ಅಮರೇಂದ್ರ ಕುಮಾರ್ ಆರ್ಯ ಎಂಬ ವಿದ್ಯಾರ್ಥಿಗಳು ಸಭೆಯಲ್ಲಿಯೇ ಧಿಕ್ಕಾರ ಕೂಗಿದ್ದರು. ಕೂಡಲೇ ಅವರಿಬ್ಬರನ್ನೂ ಬಲವಂತದಿಂದ ಬಾಯಿಮುಚ್ಚಿಸಿ, ವಶಕ್ಕೆ ಪಡೆದಿದ್ದ ಪೊಲೀಸರು, ವೈಯಕ್ತಿಕ ಬಾಂಡ್ ಮೇಲೆ ಸಂಜೆ ಇಬ್ಬರನ್ನೂ ಬಿಡುಗಡೆ ಮಾಡಿದ್ದರು.
ಆದರೆ, ಸಂಜೆ ತಾವು ಉಳಿದುಕೊಂಡಿದ್ದ ವಿವಿ ಹಾಸ್ಟೆಲ್ ಗೆ ವಾಪಸ್ಸಾದಾಗ ಅವರಿಗೆ ಆಘಾತ ಕಾದಿತ್ತು. ಏಕೆಂದರೆ, ಅವರನ್ನು ದಿಢೀರನೆ ಹಾಸ್ಟೆಲ್ ನಿಂದ ಹೊರ ಹಾಕಲಾಗಿತ್ತು. ಪ್ರಧಾನಿ ಕಾರ್ಯಕ್ರಮದಲ್ಲಿ ಗದ್ದಲ ವೆಬ್ಬಿಸಿದ ಕಾರಣದಿಂದ ತಮ್ಮ ವಿರುದ್ಧ ಶಿಸ್ತು ಕ್ರಮವಾಗಿ ವಿವಿ ಆಡಳಿತ ಹೀಗೆ ಮಾಡಿದೆ ಎಂದು 31 ವರ್ಷದ ನಿರ್ಮಲ್ ಹೇಳಿದ್ದಾರೆ ಎಂದು ದ ಹಿಂದೂ ವರದಿ ಮಾಡಿದೆ, ನಿರ್ಮಲ್ ಮತ್ತು ಆರ್ಯ ವಿರುದ್ಧ ಸೆಕ್ಷನ್ 151ರಡಿ ಪ್ರಕರಣ ದಾಖಲಾಗಿದ್ದು, ಇಬ್ಬರೂ ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


