ಅತ್ಯಾಚಾರಿಯ ಕೆನ್ನೆಗೆ ಐದೇಟು; ಇದು ಪಂಚಾಯಿತಿ ತೀರ್ಪು!
5 ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಆಕೆಯ ಸಾವಿಗೆ ಕಾರಣನಾದ ಕಾಮಾಂಧನಿಗೆ ಸ್ಥಳೀಯ ಪಂಚಾಯಿತಿಯೊಂದು ಕೆನ್ನೆಗೆ ಐದೇಟು ನೀಡುವ ಶಿಕ್ಷೆ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ...

ಘಾಜಿಯಾಬಾದ್: 5 ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಆಕೆಯ ಸಾವಿಗೆ ಕಾರಣನಾದ ಕಾಮಾಂಧನಿಗೆ ಸ್ಥಳೀಯ ಪಂಚಾಯಿತಿಯೊಂದು ಕೆನ್ನೆಗೆ ಐದೇಟು ನೀಡುವ ಮೂಲಕ "ಘೋರ" ಶಿಕ್ಷೆ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ.
ಉತ್ತರ ಪ್ರದೇಶದ ಘಾಜಿಯಾಬಾದ್ ನ ಶಹಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದು ಆಕೆಯ ಸಾವಿಗೆ ಕಾರಣನಾಗಿದ್ದ ಕಾಮಾಂಧನಿಗೆ ಸ್ಥಳೀಯ ಪಂಚಾಯಿತಿ ಕೆನ್ನೆಗೆ ಐದೇಟು ನೀಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ. ಈ ವಿಚಾರ ಇದೀಗ ಪೊಲೀಸರ ಗಮನಕ್ಕೆ ಬಂದಿದ್ದು, ಅತ್ಯಾಚಾರದಲ್ಲಿ ಪಾಲ್ಗೊಂಡಿದ್ದ ಆರೋಪಿ ಮತ್ತು ಪಂಚಾಯತಿ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಅತ್ಯಾಚಾರ ಆರೋಪಿ ಸೇರಿದಂತೆ ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಘಟನೆ ವಿವರ:
ಶಹಾಪುರ್ ಗ್ರಾಮದಲ್ಲಿ ಕಳೆದ ಭಾನುವಾರ ಸಂಜೆ ಸುಮಾರು 5 ಗಂಟೆ ಸುಮಾರಿನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಪುಟ್ಟ ಬಾಲಕಿಯನ್ನು ಆಕೆಯ ಸಹೋದರ ಸಂಬಂಧಿ ಓಮ್ ದೇವ್ ಅಲಿಯಾಸ್ ಟೈಗರ್ ಎಂಬಾತ ಅಪಹರಿಸುತ್ತಾನೆ. ಬಳಿಕ ಆಕೆಯನ್ನು ರೂಮಿನೊಳಗೆ ಕರೆದೊಯ್ದು ಅತ್ಯಾಚಾರ ಮಾಡುತ್ತಾನೆ. ಬಾಲಕಿಯ ಚೀರಾಟ ಕೇಳಿ ಓಡಿಬಂದ ಬಾಲಕಿ ತಾಯಿ ಓಂ ದೇವ್ ನಿಂದ ಮಗಳನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾರೆ. ಬಾಲಕಿ ತಾಯಿ ಆಗಮನವಾಗುತ್ತಿದ್ದಂತೆಯೇ ಓಂ ದೇವ್ ಆಕೆಯ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗುತ್ತಾನೆ.
ಈ ವಿಚಾರವನ್ನು ಬಾಲಕಿ ತಾಯಿ ತನ್ನ ಗಂಡನಿಗೆ ಹೇಳಿದ್ದು, ಇಬ್ಬರೂ ಪಂಚಾಯಿತಿಯಲ್ಲಿ ಈ ಬಗ್ಗೆ ದೂರು ನೀಡುತ್ತಾರೆ. ಆದರೆ ಅತ್ಯಾಚಾರಿ ಅವರ ಸಂಬಂಧಿಕನೇ ಆದ್ದರಿಂದ ಪಂಚಾಯಿತಿಯ ಸದಸ್ಯರು ದೂರು ಪಡೆಯಲು ಹಿಂಜರಿಯುತ್ತಾರೆ. ಘಟನೆಯಿಂದ ಹಳ್ಳಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಎಣಿಸಿದ ಪಂಚಾಯಿತಿ ಸದಸ್ಯರು ಪ್ರಕರಣವನ್ನು ಪರಸ್ಪರ ಸೌಹಾರ್ಧತೆಯಿಂದ ಪರಿಷ್ಕರಿಸಿಕೊಳ್ಳುವಂತೆಯೂ ಬಾಲಕಿ ಪೋಷಕರಿಗೆ ಸಲಹೆ ನೀಡುತ್ತಾರೆ. ಅಲ್ಲದೆ ಅತ್ಯಾಚಾರಿಯ ಕೆನ್ನೆಗೆ ಐದೇಟು ನೀಡುವಂತೆ ತೀರ್ಪು ನೀಡುತ್ತಾರೆ.
ಮಾರನೆಯ ದಿನ ಬಾಲಕಿ ಶಾಲೆಗೆ ಹೋಗುವಾಗ ವಿಪರೀತ ವಾಂತಿ ಮಾಡಿಕೊಳ್ಳುತ್ತಾಳೆ. ಬಾಲಕಿ ಸ್ಥಿತಿಕಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಾರೆ. ಆದರೆ ಬಾಲಕಿ ಮಾರ್ಗ ಮಧ್ಯೆಯೇ ಸಾವನ್ನಪ್ಪುತ್ತಾಳೆ. ಪ್ರಸ್ತುತ ಅತ್ಯಾಚಾರಿಯ ವಿರುದ್ಧ ಬಾಲಕಿ ಪೋಷಕರು ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


