ಶ್ರೀಲಂಕಾದಲ್ಲಿ ಐಎನ್ಎಸ್ ವಿಕ್ರಮಾದಿತ್ಯ
ಭಾರತದ ಅತಿದೊಡ್ಡ ನೌಕಾದಳದ ಹಡಗು ಐಎನ್ಎಸ್ ವಿಕ್ರಮಾದಿತ್ಯ ಮೂರು ದಿನಗಳ ಭೇಟಿಗಾಗಿ ಶ್ರೀಲಂಕಾಗೆ ತಲುಪಿದೆ.

ಕೊಲಂಬೊ: ಭಾರತದ ಅತಿದೊಡ್ಡ ನೌಕಾದಳದ ಹಡಗು ಐಎನ್ಎಸ್ ವಿಕ್ರಮಾದಿತ್ಯ ಮೂರು ದಿನಗಳ ಭೇಟಿಗಾಗಿ ಶ್ರೀಲಂಕಾಗೆ ತಲುಪಿದೆ.
ಭಾರತೀಯ ನೌಕಾಪಡೆಯ ಐಎನ್‌ಎಸ್ ಮೈಸೂರು ವಿಕ್ರಮಾದಿತ್ಯಗೆ ಸಾಥ್ ನೀಡಿದ್ದು, ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿರ್ಕಮಾದಿತ್ಯ ಸಾಗರೋತ್ತರ ಪ್ರಯಾಣ ಕೈಗೊಂಡಿದೆ. ಐಎನ್ಎಸ್ ವಿಕ್ರಮಾದಿತ್ಯ ಶ್ರೀಲಂಕಾ- ಭಾರತದ ಕಡಲ ಸಹಕಾರದ ಕುರುಹಾಗಿದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನ್ ಹೇಳಿದೆ.
ಈ ಭೇಟಿ ವೇಳೆ ಭಾರತದ ಹಡಗು ಸಿಬ್ಬಂದಿ ಶ್ರೀಲಂಕಾದ ನೌಕಾ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಲಿದ್ದು ಯುದ್ಧ ನೌಕೆಗಳನ್ನು ಶ್ರೀಲಂಕಾ ನೌಕಾದಳದೊಂದಿಗೆ ನಡೆಸಲಾಗುವ ತಾಲೀಮಿನ ವೇಳೆ ಬಳಕೆ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


