ಆಧ್ಯಾತ್ಮದತ್ತ ಆಕರ್ಷಿತಳಾಗಿ ಹಿಮಾಲಯಕ್ಕೆ ತೆರಳಿದ ಮದ್ರಾಸ್ ಐಐಅಟಿ ವಿದ್ಯಾರ್ಥಿನಿ!
ಮದ್ರಾಸ್ ಐಐಟಿಯ ಎಂಎಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು, ಆಧ್ಯಾತ್ಮದತ್ತ ಆಕರ್ಷಿತಳಾಗಿದ್ದು ಹಿಮಾಲಯಕ್ಕೆ ತೆರಳಿದ್ದಾಳೆ.

ಚೆನ್ನೈ: ಮದ್ರಾಸ್ ಐಐಟಿಯ ಎಂಎಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು, ಆಧ್ಯಾತ್ಮದತ್ತ ಆಕರ್ಷಿತಳಾಗಿದ್ದು ಹಿಮಾಲಯಕ್ಕೆ ತೆರಳಿದ್ದಾಳೆ.
ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿನಿ ಪ್ರತ್ಯುಷಾ, ಹಾಸ್ಟೆಲ್ ನಿಂದ ಹೊರಡುವುದಕ್ಕೂ ಮುನ್ನ ಪತ್ರವೊಂದನ್ನು ಬರೆದಿಟ್ಟು, ತಾನು ಆಧ್ಯಾತ್ಮಿಕ ಸಾಧನೆಗಾಗಿ ಹಿಮಾಲಯಕ್ಕೆ ತೆರಳುತ್ತಿರುವುದಾಗಿ ಹೇಳಿದ್ದಾಳೆ. ತಾನು ದೇವರ ರಕ್ಷಣೆಯಲ್ಲಿದ್ದು ತನ್ನ ಇರುವಿಕೆ ಬಗ್ಗೆ ಕುಟುಂಬ ಸದಸ್ಯರಿಗೆ ಇನ್ನೆಂದಿಗೂ ಮಾಹಿತಿ ದೊರೆಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾಳೆ.
ಹಿಮಾಲಯಕ್ಕೆ ತೆರಳುವುದಕ್ಕೂ ಮುನ್ನ ಹಾಸ್ಟೆಲ್ ನ ದಾಖಲಾತಿ ಪುಸ್ತಕದಲ್ಲಿ ತಾನು ಜ.20 ರಂದು ವಾಪಸ್ಸಾಗುವುದಾಗಿ ಬರೆದಿದ್ದಾಳೆ, ಹಾಸ್ಟೆಲ್ ನಿಂದ ಹೊರಟ ಯುವತಿ ಮನೆಗೆ ಬಾರದೇ ಇದ್ದ ಹಿನ್ನೆಲೆಯಲ್ಲಿ ಪೋಷಕರು ಐಐಟಿ ಆಡಳಿತಮಂಡಳಿಯವರಲ್ಲಿ ವಿಚಾರಿಸಿದ ವೇಳೆ ಯುವತಿ ಹಿಮಾಲಯಕ್ಕೆ ಹೋಗಿರುವ ಅಂಶ ಬಯಲಾಗಿದೆ. ಎಫ್ ಐಆರ್ ದಾಖಲಿಸಿರುವ ಪೊಲೀಸರು ಯುವತಿಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


