ದೇಶ

ಪೋರ್ಚುಗಲ್ ಪ್ರಧಾನಿ ಗೋವಾಗೆ ಬರುವ ಮುನ್ನ ಕ್ಷಮೆ ಕೋರಬೇಕು : ಆರ್ ಎಸ್ಎಸ್ ಷರತ್ತು

ಪೋರ್ಚುಗಲ್ ನ ಪ್ರಧಾನಿ ಆಂಟೋನಿಯೊ ಕೋಸ್ಟಾ ಗೋವಾಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಮುಂದಾಗಿರುವ ಗೋವಾ ಬಿಜೆಪಿ ಸರ್ಕಾರದ ನಡೆಗೆ ಆರ್ ಎಸ್ಎಸ್ ನಿಂದ ವಿರೋಧ ವ್ಯಕ್ತವಾಗಿದೆ.

ಪೋರ್ಚುಗಲ್ ಪ್ರಧಾನಿ ಗೋವಾಗೆ ಬರುವ ಮುನ್ನ ಕ್ಷಮೆ ಕೋರಬೇಕು : ಆರ್ ಎಸ್ಎಸ್ ಷರತ್ತು
ಪೋರ್ಚುಗಲ್ ನ ಪ್ರಧಾನಿ (ಸಂಗ್ರಹ ಚಿತ್ರ)
Published On :

ಪಣಜಿ: ಪೋರ್ಚುಗಲ್ ನ ಪ್ರಧಾನಿ ಆಂಟೋನಿಯೊ ಕೋಸ್ಟಾ ಗೋವಾಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಮುಂದಾಗಿರುವ  ಗೋವಾ ಬಿಜೆಪಿ ಸರ್ಕಾರದ ನಡೆಗೆ ಆರ್ ಎಸ್ಎಸ್ ನಿಂದ ವಿರೋಧ ವ್ಯಕ್ತವಾಗಿದೆ. ವಿರೋಧದ ನಡುವೆಯೂ ಪೋರ್ಚುಗಲ್ ಪ್ರಧಾನಿ ಆಗಮನಕ್ಕೆ ಆರ್ ಎಸ್ಎಸ್ ಷರತ್ತು ಬದ್ಧ ಒಪ್ಪಿಗೆ ಸೂಚಿಸಿದೆ.
ಗೋವಾದಲ್ಲಿ 450 ವರ್ಷಗಳ ಕಾಲ ಪೋರ್ಚುಗಲ್ ನವರು ನಡೆಸಿದ ದಬ್ಬಾಳಿಕೆಯ ಆಡಳಿತಕ್ಕೆ ಆಂಟೋನಿಯೊ ಕೋಸ್ಟಾ ಕ್ಷಮೆ ಕೋರಿದರೆ ಮಾತ್ರ, ಅವರು ಗೋವಾದ ನೆಲದಲ್ಲಿ ಸ್ವಾಗತ ಸ್ವೀಕರಿಸಬಹುದು ಎಂದು ಆರ್ ಎಸ್ಎಸ್ ನ ಗೋವಾ ಮುಖಂಡ ಸುಭಾಷ್ ವೆಲಿಂಗ್ಕರ್ ಹೇಳಿದ್ದಾರೆ.
ದಕ್ಷಿಣ ಗೋವಾದ ಮಾರ್ಗೋವಾ ನಗರದ ಹಿನ್ನೆಲೆ ಹೊಂದಿರುವ ಪೋರ್ಚುಗಲ್ ನ ಪ್ರಧಾನಿ ಆಂಟೋನಿಯೊ ಕೋಸ್ಟಾ ಅವರಿಗೆ ಅಭಿನಂದನೆ ಸಲ್ಲಿಸಲು  ಜ.15 ರಂದು ಗೋವಾ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸದ್ಯದಲ್ಲೇ ಗೋವಾ ಸರ್ಕಾರ ಪೋರ್ಚುಗಲ್ ಪ್ರಧಾನಿ ಕೋಸ್ಟಾ ಅವರನ್ನು ಆಹ್ವಾನಿಸುವುದಾಗಿ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದರು.    
ಪೋರ್ಚುಗೀಸರು ಗೋವಾದ ಮೇಲೆ ದಬ್ಬಾಳಿಕೆ ನಡೆಸಿ ಉಂಟುಮಾಡಿರುವ ವಿನಾಶ ಅಕ್ಷಮ್ಯ ಅಪರಾಧವಾಗಿದೆ. ಗೋವಾಗೆ ಬುರುವುದಿದ್ದರೆ ಪೋರ್ಚುಗಲ್ ನ ಪ್ರಧಾನಿ ಪೋರ್ಚುಗೀಸರ ಪಾಪಗಳಿಗೆ ಕ್ಷಮೆ ಕೋರಬೇಕು ಎಂದು ಸುಭಾಷ್ ವೆಲಿಂಗ್ಕರ್  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.