ದೇಶ

ತಮಿಳುನಾಡು ಸರ್ಕಾರದಿಂದ ಅಮ್ಮಾ ಕಾಲ್ ಸೆಂಟರ್ ಗೆ ಚಾಲನೆ

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಮಿಳುನಾಡು ಸರ್ಕಾರದ ಅಮ್ಮಾ ಕಾಲ್ ಸೆಂಟರ್ ಗೆ ಮುಖ್ಯಮಂತ್ರಿ ಜಯಲಲಿತಾ ಜ.19 ರಂದು ಚಾಲನೆ ನೀಡಿದ್ದಾರೆ.

ತಮಿಳುನಾಡು ಸರ್ಕಾರದಿಂದ ಅಮ್ಮಾ ಕಾಲ್ ಸೆಂಟರ್ ಗೆ ಚಾಲನೆ
ಅಮ್ಮಾ ಕಾಲ್ ಸೆಂಟರ್ ಗೆ ಜಯಲಲಿತಾ ಚಾಲನೆ
Published On :

ಚೆನ್ನೈ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ತಮಿಳುನಾಡು ಸರ್ಕಾರದ ಅಮ್ಮಾ ಕಾಲ್ ಸೆಂಟರ್ ಗೆ ಮುಖ್ಯಮಂತ್ರಿ ಜಯಲಲಿತಾ ಜ.19 ರಂದು ಚಾಲನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಮ್ಮಾ ಕಾಲ್ ಸೆಂಟರ್ ನ್ನು ಸಿಎಂ ಜಯಲಲಿತಾ ಬಿಡುಗಡೆ ಮಾಡಿದ್ದು, ಜನರ ಸಮಸ್ಯೆಗಳನ್ನು ಆಲಿಸಲು ಇರುವ ಈ ವ್ಯವಸ್ಥೆ ದಿನದ 24 ಗಂಟೆ ವರ್ಷದ 365 ದಿನವೂ ಕಾರ್ಯ ನಿರ್ವಹಿಸಲಿದೆ. ಕಾಲ್ ಸೆಂಟರ್ ಗೆ ನೀಡಲಾಗಿರುವ "1100 " ಸಂಖ್ಯೆ ಸುಂಕರಹಿತವಾದ(ಟೋಲ್ ಫ್ರೀ) ನಂಬರ್ ಆಗಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. 
ಮುಖ್ಯಮಂತ್ರಿ ಕಾರ್ಯಾಲಯ ಈಗಾಗಲೇ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ವ್ಯವಸ್ಥೆ ಹೋಂದಿದೆಯಾದರೂ, ಅದನ್ನು ತ್ವರಿತಗತಿಯಲ್ಲಿ ಪರಿಹರಿಸುವುದಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕಾಲ್ ಸೆಂಟರ್ ನ್ನು ತೆರೆಯಲಾಗಿದೆ.  ಸಾರ್ವಜನಿಕರು ನೀಡಲಾಗುವ ದೂರನ್ನು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ದೂರಿನ ಬಗ್ಗೆ ಕೈಗೊಳ್ಳಲಾದ ಕ್ರಮವನ್ನು ದೂರುದಾರರಿಗೆ ಎಸ್ಎಂಎಸ್ ಮೂಲಕ ತಿಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಕಾಲ್ ಸೆಂಟರ್ ಪ್ರತಿ ದಿನ 15 ಸಾವಿರ ಕರೆಗಳನ್ನು ಸ್ವೀಕರಿಸಿ ಬಗೆಹರಿಸಲಿದೆ. ಇದಕ್ಕಾಗಿ 138 ನಿರ್ವಾಹಕರನ್ನು ನಿಯೋಜಿಸಲಾಗಿದ್ದು, ಅಗತ್ಯತೆ ಆಧಾರದಲ್ಲಿ ನಿರ್ವಾಹಕರ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.