ಭಾರತ-ಚೀನಾ ಗಡಿಯಲ್ಲಿ 500 ಮಹಿಳಾ ಯೋಧರ ನಿಯೋಜನೆ
ಭಾರತ-ಚೀನಾ ಗಡಿಯಲ್ಲಿ ಭದ್ರತಾ ಪಡೆಗಳಲ್ಲಿ ಮಹಿಳಾ ಯೋಧರ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸದಾಗಿ...

ಪಂಚಕುಲಾ: ಭಾರತ-ಚೀನಾ ಗಡಿಯ ಭದ್ರತಾ ಪಡೆಗಳಲ್ಲಿ ಮಹಿಳಾ ಯೋಧರ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸದಾಗಿ ನೇಮಕವಾಗಿರುವ 500 ಭಾರತ-ಟಿಬೆಟನ್ ಗಡಿ ಪೊಲೀ ಸ್ (ಐಟಿಬಿಪಿ) ಮಹಿಳಾ ಯೋಧರನ್ನು ನಿಯೋಜನೆ ಮಾಡಿದೆ.
ಈ ಮೂಲಕ ಅತಿ ಎತ್ತರದ ಹಿಮಾಲಯದಲ್ಲಿ ನಿಯೋಜಿತವಾಗಿರುವ ಮೊದಲ ಮಹಿಳಾ ಯೋಧರ ತಂಡ ಎಂಬ ಗೌರವಕ್ಕೆ ಈ ಮಹಿಳೆಯರು ಪಾತ್ರರಾಗಲಿದ್ದಾರೆ. ಈ ಮಹಿಳಾ ಯೋಧರು ಹಿಮಾಲಯದ ಅತಿ ದುರ್ಗಮ ಗಡಿ ಪ್ರದೇಶಗಳನ್ನು ಕಾಯಲಿದ್ದಾರೆ.
ಇಲ್ಲಿನ 500 ಮಹಿಳಾ ಯೋಧರಿಗೆ 44 ವಾರಗಳ ಕಠಿಣ ತರಬೇತಿ ನೀಡಿದೆ. ಐಟಿಬಿಪಿ ಡೈರೆಕ್ಟರ್ ಜನರಲ್ ಕೃಷ್ಣ ಚೌಧರಿ ಅವರ ಸಮ್ಮುಖದಲ್ಲಿ ಮಹಿಳಾ ಯೋಧರು ಪಾಸಿಂಗ್ ಔಟ್ ಪೆರೇಡ್ನಲ್ಲಿ ಪಾಲ್ಗೊಂಡು ಐಟಿಬಿಪಿಗೆ ಸೇರ್ಪಡೆಯಾದರು. ಮಾರ್ಚ್ ವೇಳೆಗೆ ಭಾರತ-ಚೀನಾ ಗಡಿ ಪ್ರದೇಶದ 20 ಸ್ಥಳಗಳಲ್ಲಿ ಮಹಿಳಾ ಯೋಧರನ್ನು ನಿಯೋಜನೆ ಮಾಡಲಾಗುತ್ತಿದೆ. ಸಮುದ್ರ ಮಟ್ಟದಿಂದ 8 ಸಾವಿರ ಅಡಿಯಿಂದ 14 ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶಗಳಿಗೆ ಮಹಿಳಾ ಯೋಧರು ನಿಯೋಜಿತರಾಗುತ್ತಿದ್ದಾರೆ.3,488 ಕಿ.ಮೀ. ಉದ್ದದ ಭಾತರ-ಚೀನಾ ಗಡಿಯಲ್ಲಿರುವ ವಾಸ್ತವಿಕ ಗಡಿ ರೇಖೆಯನ್ನು ಇಂಡೋ-ಟಿಬೆಟಿಯನ್ ಗಡಿ ಭದ್ರತಾ ಪೊಲೀಸ್ ಯೋಧರು ಕಾಯುತ್ತಿದ್ದಾರೆ.
1962ರ ಚೀನಾ ಆಕ್ರಮಣದ ನಂತರ ಐಟಿಬಿಪಿಯನ್ನು ಗಡಿಯಲ್ಲಿ ನಿಯೋಜಿಸಲಾಗಿತ್ತು. ಸೇನೆಯ ಒಟ್ಟು ಸಂಖ್ಯೆಯಲ್ಲಿ ಶೇಕಡಾ 40ರಷ್ಟು ಮಹಿಳಾ ಯೋಧರನ್ನು ನಿಯೋಜಿಸುವ ಉದ್ದೇಶ ಸರ್ಕಾರದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


